ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಂದ ಸಾಕ್ಷಿಗಳಿಗೆ ಜೀವ ಬೆದರಿಕೆ ಇದೆ ಎನ್ನುವ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಆರೋಪಿಗಳಾಗಲೀ, ಅವರ ಕಡೆಯವರಾಗಲೀ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬುದಾಗಿ ಬೆಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಲಯವು ಖಡಕ್ ಎಚ್ಚರಿಕೆ ನೀಡಿದೆ.
ಜನಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಪರ ಜನಶಕ್ತಿ ಸಾಬೀತು – ಸಿಎಂ ಬಸವರಾಜ ಬೊಮ್ಮಾಯಿ
ಇಂದು ಗೌರಿಲಂಕೇಶ್ ಹತ್ಯೆ ಆರೋಪಿಗಳಿಂದ ಸಾಕ್ಷಿಗಳಿಗೆ ಜೀವ ಬೆದರಿಕೆ ಇದೆ ಎನ್ನುವ ಸಂಬಂಧ ಬೆಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿಯ ವಿಚಾರಣೆ ನಡೆಸಿದರು. ಈ ವೇಳೆ ಕೋರ್ಟ್ ಗೆ ಪ್ರಾಸಿಕ್ಯೂಷನ್ ಪರ ವಕೀಲರು ಹೇಳಿಕೆ ನೀಡಿದರು. ಆಗ ಬೆದರಿಕೆ ಇದೆಯೇ ಎಂದು ಸಾಕ್ಷಿಗೆ ನ್ಯಾಯಾಧೀಶರು ಪ್ರಶ್ನಿಸಿದರು. ಬೆದರಿಕೆ ಇಲ್ಲ ಎಂಬುದಾಗಿ ಸಾಕ್ಷಿಯವರು ಪ್ರತಿಕ್ರಿಯಿಸಿದರು.
ಈ ವೇಳೆ ನ್ಯಾಯಾಲಯವು ಆರೋಪಿಯಾಗಲೀ, ಅವರ ಕಡೆಯವರಾಗಲೀ, ಸಾಕ್ಷಿಗಳಿಗೆ ಬೆದರಿಸಬಾರದು. ಬೆದರಿಕೆ ಹಾಕಿದದ್ರೇ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಲಿದೆ ಎಂಬುದಾಗಿ ಆರೋಪಿಗಳಿಗೆ ಎಚ್ಚರಿಕೆ ನೀಡಿತು.
BIGG NEWS: ಕಡೂರು ಕ್ಷೇತ್ರದ ಅಭಿವೃದ್ಧಿಗೆ 2,800 ಕೋಟಿ ಅನುದಾನ; ಸಿಎಂ ಬೊಮ್ಮಾಯಿ
ಈ ವೇಳೆ ನಾವು ಯಾರಿಗೂ ಸಹ ಬೆದರಿಕೆ ಹಾಕಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಆರೋಪಿಗಳು ತಿಳಿಸಿದರು. ಆಗ ನ್ಯಾಯಾಲಯವು ಸಾಕ್ಷಿಗಳಿಗೆ ಅಗತ್ಯವಿದ್ದರೇ ಭದ್ರತೆ ನೀಡಲು ಸೂಚನೆ ನೀಡಿತು.