ಮಡಿಕೇರಿ: ಮೈಸೂರು ಟಿಪ್ಪು ಪ್ರತಿಮೆ ಚರ್ವೆ ಹಿನ್ನೆಲೆಯಲ್ಲಿ ಟಿಪ್ಪುವಿಗೂ ಮೈಸೂರಿಗೂ ಸಂಬಂಧವಿಲ್ಲ. ಮೈಸೂರಿನಲ್ಲಿ ಮಹಾರಾಜರು ಮಾತ್ರವೇ ಇರಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
BIG NEWS: ಎಲ್ಲಾ ಶಾಲೆಗಳಲ್ಲಿ ವಿವೇಕಾನಂದ ಪೋಟೋ ಹಾಕಲು ತೀರ್ಮಾನ – ಸಚಿವ ಬಿ.ಸಿ ನಾಗೇಶ್
ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರು ಕೆಂಪೇಗೌಡರ ದೂರದೃಷ್ಟಿಯ ಫಲ ಅವರಿಂದ ಬೆಂಗಳೂರು ಸ್ಥಾಪನೆಯಾಗಿದೆ. ಟಿಪ್ಪು ಸುಲ್ತಾನ್ ಪ್ರತಿಮೆ ಮಾಡಿದರೆ ಏನು ನೆನಪಾಗುತ್ತೆ? ಜನರಿಗೆ ಅವರ ಬಗ್ಗೆ ಏನು ಹೇಳಬೇಕು? ಟಿಪ್ಪು ಕೊಡವರ ಹತ್ಯಾಕಾಂಡ ಮಾಡಿದರ ಬಗ್ಗೆ ಹೇಳಬೇಕಾ? ಅಲ್ಲದೆ ಕನ್ನಡವನ್ನು ಕಗ್ಗೊಲೆ ಮಾಡಿದ ವ್ಯಕ್ತಿಯ ಪ್ರತಿಮೆ ಮಾಡುತ್ತೀರಾ? ಎಂದು ಆಕ್ರೋಶ ಹೊರಹಾಕಿದರು.
BIG NEWS: ಎಲ್ಲಾ ಶಾಲೆಗಳಲ್ಲಿ ವಿವೇಕಾನಂದ ಪೋಟೋ ಹಾಕಲು ತೀರ್ಮಾನ – ಸಚಿವ ಬಿ.ಸಿ ನಾಗೇಶ್
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಟಿಪ್ಪು ಜಯಂತಿ ಮಾಡಿಸಿದ್ದರು. ಇದು ಅರಣ್ಯ ಇಲಾಖೆಯು ವೀರಪ್ಪನ್ ಜಯಂತಿ ಮಾಡಿದಂತಾಗುತ್ತದೆ. ಟಿಪ್ಪು ಕ್ರೌರ್ಯಕ್ಕೆ ದ್ಯೋತಕವಾಗಿದ್ದಾನೆ. ಟಿಪ್ಪು ರಾಕೆಟ್ ಹಾರಿಸಲೇ ಇಲ್ಲ. ಯುದ್ಧದಲ್ಲಿ ಟಿಪ್ಪು ರಾಕೆಟ್ ಬಳಕೆ ಮಾಡಿದ ಉದಾಹರಣೆಯೇ ಇಲ್ಲ. ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಟಿಪ್ಪು ವೈಭವೀಕರಣ ಮಾಡಬೇಡಿ ಎಂದು ಕಿಡಿಕಾರಿದರು.