ಬೆಂಗಳೂರು: ಸಾರ್ವಜನಿಕ/ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಳಗಾವಿಯ ಸಂಸದ ಮಂಗಳ್ ಸುರೇಶ್ ಅಂಗಡಿ ( MP Belagavi Mangal Suresh Angadi ) ಅವರು ಶಬರಿಮಲೆಗೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೇ ಸಚಿವಾಲಯಕ್ಕೆ ಮನವಿ ಸಲ್ಲಿಸಿದರು. ಈಗ, ಕೆಳಗಿನಂತೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ( South Western Railway ) ನಿರ್ಧರಿಸಿದೆ.
BIGG NEWS: ನೀವು ಕೋಲಾರಕ್ಕೆ ಹೋಗಬೇಡಿ; ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ: ಕೆ.ಎಸ್ ಈಶ್ವರಪ್ಪ ಸಲಹೆ
A) ರೈಲು ಸಂಖ್ಯೆ 07357/07358 ಬೆಳಗಾವಿ – ಕೊಲ್ಲಂ – ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ (1 ಟ್ರಿಪ್)
ರೈಲು ಸಂಖ್ಯೆ 07357 ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 20 ರಂದು ಬೆಳಿಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ, ರೈಲು ಸಂಖ್ಯೆ 07358 ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 21 ರಂದು ಕೊಲ್ಲಂನಿಂದ ಸಾಯಂಕಾಲ 05:10 ಕ್ಕೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಖಾನಾಪುರ, ಲೋಂಡಾ, ಧಾರವಾಡ, ಎಸ್.ಎಸ್.ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ರಷ್ಟು ಅರ್ಹರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ – ಸಚಿವ ಡಾ.ಕೆ.ಸುಧಾಕರ್
ಈ ವಿಶೇಷ ರೈಲು ಒಂದು 2ನೇ ಹವಾನಿಯಂತ್ರಿತ ದರ್ಜೆ, ಎಂಟು 3ನೇ ಹವಾನಿಯಂತ್ರಿತ ದರ್ಜೆ, ಒಂಬತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳೊಂದಿಗೆ ಜನರೇಟರ್ ಕಾರ ಒಳಗೊಂಡಿರುವ 20 ಬೋಗಿಗಳು ಹೊಂದಿರುತ್ತದೆ.
B) ರೈಲು ಸಂಖ್ಯೆ 07359/07360 ಎಸ್.ಎಸ್.ಎಸ್ ಹುಬ್ಬಳ್ಳಿ – ಕೊಲ್ಲಂ – ಎಸ್.ಎಸ್.ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ (1 ಟ್ರಿಪ್)
ರೈಲು ಸಂಖ್ಯೆ 07359 ಎಸ್.ಎಸ್.ಎಸ್ ಹುಬ್ಬಳ್ಳಿ – ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 27 ರಂದು ಮಧ್ಯಾಹ್ನ 02:40 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ, ರೈಲು ಸಂಖ್ಯೆ 07360 ಕೊಲ್ಲಂ – ಎಸ್.ಎಸ್.ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 28 ರಂದು ಕೊಲ್ಲಂನಿಂದ ಸಾಯಂಕಾಲ 05:10 ಕ್ಕೆ ಹೊರಟು ಮರುದಿನ ರಾತ್ರಿ 8 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ತಲುಪಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
C) ರೈಲು ಸಂಖ್ಯೆ 07361/07362 ಬೆಳಗಾವಿ – ಕೊಲ್ಲಂ – ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ (7 ಟ್ರಿಪ್)
ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ (ರೈಲು ಸಂಖ್ಯೆ 07361) ರೈಲು ಡಿಸೆಂಬರ್ 4 ರಿಂದ ಜನವರಿ 15 ರ ವರೆಗೆ ಬೆಳಗಾವಿಯಿಂದ ಪ್ರತಿ ಭಾನುವಾರದಂದು ಬೆಳಿಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ (ರೈಲು ಸಂಖ್ಯೆ 07362) ರೈಲು ಡಿಸೆಂಬರ್ 5 ರಿಂದ ಜನವರಿ 16 ರ ವರೆಗೆ ಕೊಲ್ಲಂನಿಂದ ಪ್ರತಿ ಸೋಮವಾರದಂದು ಸಾಯಂಕಾಲ 05:10 ಗಂಟೆಗೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ.
ಬಾಡೂಟದಿಂದ ಮತಕ್ಷೇತ್ರಕ್ಕೆ ಮಾಡಿದ ವಂಚನೆ ಜನರು ಮರೆಯಲ್ಲ: ಸಚಿವ ಶ್ರೀರಾಮುಲು ವಿರುದ್ಧ ಡಾ.ಯೋಗೇಶ್ ಬಾಬು ಕಿಡಿ
ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಖಾನಾಪುರ, ಲೋಂಡಾ, ಧಾರವಾಡ, ಎಸ್.ಎಸ್.ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ಮೇಲೆ ತಿಳಿಸಿದ ವಿಶೇಷ ರೈಲುಗಳು (07359/07360 ಮತ್ತು 07361/07362) ಒಂದು 2ನೇ ಹವಾನಿಯಂತ್ರಿತ ದರ್ಜೆ, ಎರಡು 3ನೇ ಹವಾನಿಯಂತ್ರಿತ ದರ್ಜೆ, ಹತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳಿಂದ ಕೂಡಿದ/ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ ಒಳಗೊಂಡಿರುವ 15 ಬೋಗಿಗಳು ಹೊಂದಿರುತ್ತದೆ ಎಂದು ನೈರುತ್ಯ ರೈಲ್ವೆ ಇಲಾಖೆಯು ತಿಳಿಸಿದೆ.