ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ( IPS Officer Transfer ) ಮಾಡಿ ಆದೇಶಿಸಿದೆ.
ಈ ಕುರಿತಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಆಡಳಿತ ವಿಭಾಗ ಎಡಿಜಿಪಿಯಾಗಿದ್ದಂತ ಡಾ.ಎಂ ಅಬ್ದುಲ್ಲಾ ಸಲೀಂ ಅವರನ್ನು ಬೆಂಗಳೂರು ನಗರ ಸಂಚಾರ ವಿಭಾಗದ ಎಡಿಜಿಪಿ ಹಾಗೂ ಎಸ್ಪಿಯಾಗಿ ನೇಮಿಸಲಾಗಿದೆ.
ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ರಷ್ಟು ಅರ್ಹರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ – ಸಚಿವ ಡಾ.ಕೆ.ಸುಧಾಕರ್
ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗ, ಎಕಾನಾಮಿಕಲ್ ಅಫೆನ್ಸ್ ನ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಿಸಲಾಗಿದೆ. ಮಂಗಳೂರು ವೆಸ್ಟ್ರನ್ ರೇಂಜ್ ನ ಐಜಿಪಿಯಾಗಿದ್ದಂತ ದೇವಜ್ಯಾತಿ ರೇ ಅವರನ್ನು ಹ್ಯೂಮನ್ ರೈಟ್ಸ್ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಕ್ರೈಂ ವಿಭಾಗದ ಡಿಐಜಿ ಮತ್ತು ಜಾಯಿಂಟ್ ಕಮೀಷನರ್ ಆಗಿದ್ದ ರಮಣ ಗುಪ್ತ ಅವರನ್ನು ಬೆಂಗಳೂರು ನಗರ ಇಂಟೆಲಿಜೆನ್ಸಿಯ ಡಿಐಜಿ ಮತ್ತು ಜಂಟಿ ಕಮೀಷನರ್ ಆಫ್ ಪೊಲೀಸ್ ಆಗಿ ನೇಮಿಸಲಾಗಿದೆ.
ಬೆಂಗಳೂರು ನಗರ ಸಂಚಾರ ವಿಭಾಗದ ಡಿಐಜಿ ಹಾಗೂ ಜಂಟಿ ಕಮೀಷನರ್ ಆಗಿದ್ದಂತ ಡಾ.ಬಿಆರ್ ರವಿಕಾಂತೇಗೌಡ ಅವರನ್ನು ಸಿಐಜಿ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಇಂಟರ್ನಲ್ ಸೆಕ್ಯೂರಿಟಿ ವಿಭಾಗದ ಡಿಐಜಿ ಆಗಿದ್ದಂತ ಬಿಎಸ್ ಲೋಕೇಶ್ ಕುಮಾರ್ ಅವರನ್ನು ಬಳ್ಳಾರಿ ವಿಭಾಗದ ಡಿಐಜಿಯಾಗಿ ನೇಮಕ ಮಾಡಲಾಗಿದೆ.
BIGG NEWS: ನೀವು ಕೋಲಾರಕ್ಕೆ ಹೋಗಬೇಡಿ; ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ: ಕೆ.ಎಸ್ ಈಶ್ವರಪ್ಪ ಸಲಹೆ
ಮೈಸೂರು ನಗರದ ಡಿಐಜಿ ಮತ್ತು ಕಮೀಷನರ್ ಆಗಿದ್ದಂತ ಡಾ.ಚಂದ್ರಗುಪ್ತ ಅವರನ್ನು ಮಂಗಳೂರು ವೆಸ್ಟ್ರನ್ ವಿಭಾಗದ ಡಿಐಜಿಯಾಗಿ ವರ್ಗಾಹಿಸಲಾಗಿದೆ. ಬೆಂಗಳೂರು ನಗರ ಕ್ರೈಂ-1 ವಿಭಾಗದ ಡಿಸಿಪಿ ಡಾ.ಶರಣಪ್ಪ ಎಸ್ ಡಿ ಅವರನ್ನು ಬೆಂಗಳೂರು ನಗರ ಕ್ರೈಂ ವಿಭಾಗದ ಜಂಟಿ ಕಮೀಷನರ್ ಆಗಿ ವರ್ಗಾವಣೆ ಮಾಡಿದೆ.
ಸಿಐಡಿಯ ಎಸ್ಪಿಯಾಗಿದ್ದಂತ ಎಂಎನ್ ಅನುಚೇತ್ ಅವರನ್ನು ಸಂಚಾರ ವಿಭಾಗದ ಜಂಟಿ ಕಮೀಷನರ್ ಆಗಿ, ಸಿಐಡಿಯ ಎಸ್ಪಿಯಾಗಿದ್ದಂತ ರವಿ ಡಿ ಚೆನ್ನಣ್ಣನವರ್ ಅವರನ್ನು ಕಿಯೋನಿಕ್ಸ್ ಎಂ.ಡಿಯಾಗಿ ವರ್ಗಾವಣೆ ಮಾಡಲಾಗಿದೆ. ಸಿಐಡ-1 ವಿಭಾಗದ ಎಸ್ಪಿಯಾಗಿದ್ದಂತ ಬಿ ರಮೇಶ್ ಅವರನ್ನು ಮೈಸೂರು ನಗರ ಪೊಲೀಸ್ ಕಮೀಷನರ್ ಆಗಿ ನೇಮಿಸಿದೆ.