ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ( Government Primary School Teacher ) ಕರ್ತವ್ಯ ನಿರ್ವಹಿಸುತ್ತಿರುವಂತ ಶಿಕ್ಷಕರನ್ನೇ, ಶೇ.40ರಷ್ಟು ಪ್ರಮಾಣದಲ್ಲಿ ಮುಂಬಡ್ತಿಯ ಮೂಲಕ 6 ರಿಂದ 8ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಗೆ ( Recruitment of Graduate Teachers ) ಆರ್ಥಿಕ ಇಲಾಖೆ ( Finance Department ) ಒಪ್ಪಿಗೆ ಸೂಚಿಸಿದೆ. ಈ ಮೂಲಕ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಈ ಬಿಜೆಪಿ ಸರಕಾರಕ್ಕೆ ಆತ್ಮಸಾಕ್ಷಿಯೇ ಇಲ್ಲ- HDK ಕಿಡಿ
ಈ ಬಗ್ಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿರುವಂತ ಆದೇಶ ಪ್ರತಿಯು ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಆ ಆದೇಶದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ/ನೇಮಕಾತಿ) ನಿಯಮಗಳಲ್ಲಿ 6 ರಿಂದ 8 ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ನೇಮಕಾತಿ ನಿಯಮವನ್ನು ಮಾರ್ಪಡಿಸಿ ಶೇಕಡ 60 ರಷ್ಟು ಹುದ್ದೆಗಳನ್ನು ನೇರ ನೇಮಕಾತಿಯಿಂದಲೂ ಹಾಗೂ ಶೇಕಡ 40 ರಷ್ಟು ಹುದ್ದೆಗಳನ್ನು ಸೇವಾನಿರತ ಪ್ರಾಥಮಿಕ ಶಿಕ್ಷಕರ ವೃಂದದಿಂದ ಮುಂಬಡ್ತಿಯ ಮೂಲಕ ಭರ್ತಿ ಮಾಡಲು ಅವಕಾಶವಾಗುವಂತೆ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿಸಿದೆ ಎಂದು ತಿಳಿಸಿದೆ.
BIGG NEWS: ನೀವು ಕೋಲಾರಕ್ಕೆ ಹೋಗಬೇಡಿ; ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ: ಕೆ.ಎಸ್ ಈಶ್ವರಪ್ಪ ಸಲಹೆ
ಇನ್ಮುಂದೆ ಆರ್ಥಿಕ ಇಲಾಖೆಯು 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ವೃಂದದ ನೇಮಕಾತಿ ನಿಯಮಗಳನ್ನು ಮಾರ್ಪಡಿಗೆ ಸಹಮಿತಿ ಸೂಚಿಸಿದ ಕಾರಣ, ಇನ್ಮುಂದೆ 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ವೃಂದದ ನೇಮಕಾತಿಯನ್ನು ಶೇ.60ರಷ್ಟು ನೇರ ನೇಮಕಾತಿಯಿಂದ, ಶೇ.40ರಷ್ಟು ಸೇವಾನಿರತ ಶಿಕ್ಷಕರಿಗೆ ಮುಂಬಡ್ತಿ ಸಿಗಲಿದೆ.