ಮುಂಬೈ: ಹಿರಿಯ ಮರಾಠಿ ನಟ ಸುನಿಲ್ ಶೆಂಡೆ ಅವರು ಇಂದು ಮುಂಬೈನ ತಮ್ಮ ನಿವಾಸದಲ್ಲಿ ( Veteran Marathi actor Sunil Shende passed away ) ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿದ್ದು, ಅವರು ಪತ್ನಿ ಜ್ಯೋತಿ ಮತ್ತು ಇಬ್ಬರು ಪುತ್ರರಾದ ಓಂಕಾರ್ ಮತ್ತು ಹೃಷಿಕೇಶ್ ಅವರನ್ನು ಅಗಲಿದ್ದಾರೆ.
ಟ್ವಿಟರ್ ಬಳಕೆದಾರ ಪವನ್ ಝಾ ಸುನಿಲ್ ಶೆಂಡೆ ಅವರ ನಿಧನದ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ, “ಖ್ಯಾತ ಹಿಂದಿ ಮತ್ತು ಮರಾಠಿ ಕ್ಯಾರೆಕ್ಟರ್ ನಟ ಸುನಿಲ್ ಶೆಂಡೆ ಅವರು ಇಂದು ನಿಧನರಾದರು. #RIP ಗಾಂಧಿ-82ರಲ್ಲಿ ಅವರು ಸಣ್ಣ ಪಾತ್ರದೊಂದಿಗೆ ಪ್ರಾರಂಭಿಸಿದರು. 80 ಮತ್ತು 90ರ ದಶಕದ ಹಿಂದಿ ಚಿತ್ರರಂಗದಲ್ಲಿ ಕೆಲವು ಸಣ್ಣ, ಕೆಲವು ಪ್ರಮುಖ ಪಾತ್ರಗಳನ್ನು ಮಾಡಿದರು. ಈ ಮೂಲಕ ಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು ಎಂದು ಹೇಳಿ, ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.
ಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಈ ಬಿಜೆಪಿ ಸರಕಾರಕ್ಕೆ ಆತ್ಮಸಾಕ್ಷಿಯೇ ಇಲ್ಲ- HDK ಕಿಡಿ
ಈ ಸುದ್ದಿ ಹೊರಬಿದ್ದಾಗಿನಿಂದ, ಹಲವಾರು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸುನಿಲ್ ಶೆಂಡೆ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಾದ ವಾಸ್ತಾವ್, ಸರ್ಫರೋಶ್, ಗಾಂಧಿ, ಆಯಿ, ಜೋಡಿದಾರ್, ನಿಡಾನ್, ಜಮ್ಲಾ ಹೋ ಜಮ್ಲಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
Noted Hindi & Marathi character actor Sunil Shinde passed away yday. #RIP
He started with a miniscule role in Gandhi-82 & went on to do some small, some significant roles in Hindi Cinema of 80s & 90s. He played @iamsrk's Babuji, d Circus owner in Circus (TV-DD) @SukanyaVerma pic.twitter.com/4wKJOw9i2I
— Pavan Jha (@p1j) November 14, 2022