ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಮಾತ್ರ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಅರಿಶಿನವು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವುದರೊಂದಿಗೆ ಆರೋಗ್ಯದ ದೃಷ್ಟಿಯಲ್ಲೂ ಅರಿಶಿನ ಬಹುಪಕಾರಿ
ಹಲವಾರು ಆರೋಗ್ಯ ಪ್ರಯೋಜನ ಇರುವ, ಹಲವಾರು ಮನೆ ಮದ್ದಿಗೆ ಬಳಕೆಯಾಗುವ ಅರಿಶಿನ ಯಾರಿಗೇ ಯಾನೇ ಗೊತ್ತಿಲ್ಲ. ಹೇಳಿ ಮನೆ ಮದ್ದಿನಿಂದ ಹಿಡಿದು ಅಡುಗೆಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ಅರಶಿನವನ್ನು ಬಳಕೆ ಮಾಡಲಾಗುತ್ತದೆ. ಹಸಿ ಮತ್ತು ಪುಡಿ ಮಾಡಿದ ಅರಿಶಿನ ಸರ್ವರೋಗಕ್ಕೂ ಪರಿಹಾರಕವಾಗಿದೆ ಎಂದು ಹೇಳುತ್ತಾರೆ ಹಿರಿಯರು.
ಅದನೇ ಇರಲಿ ಜನರ ಹೆಚ್ಚಾಗಿ ಬಳಕೆ ಮಾಡುವ ಅರಶಿನದಿಂದ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆಯಂತೆ. ಹೌದು, ಅರಶಿನದ ಜಾಸ್ತಿ ಬಳಕೆ ಯಕೃತ್ತು ಅಥವಾ ಲಿವರ್ ಡ್ಯಾಮೇಜ್ ಉಂಟು ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.
ಲಿವರ್ ನಮ್ಮ ದೇಹದ ಮುಖ್ಯವಾದ ಅಂಗ. ಯಕೃತ್ತು ಇಲ್ಲದಿದ್ದರೆ ಮನುಷ್ಯನೇ ಇಲ್ಲ. ಲಿವರ್ ಗೆ ಏನಾದರು ಸಂಭವಿಸಿದರೆ ಮನುಷ್ಯನ ಪ್ರಾಣಕ್ಕೆ ಕುತ್ತು. ತಿನ್ನುವ ಆಹಾರವನ್ನು ಚಯಾಪಚಯಗೊಳಿಸುವ ಮತ್ತು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಲಿವರ್ ಗೆ ಅರಿಶಿನ ಮಾರಕವಂತೆ. ಹೌದು, ಅರಶಿನದಲ್ಲಿ ಕರ್ಕ್ಯುಮಿನ್ ಎಂಬ ಕೆಮಿಕಲ್ ವೊಂದಿದೆ.
ಈ ಕೆಮಿಕಲ್ ಮನುಷ್ಯನ ಲಿವರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯಂತೆ. ಇದು ಲಿವರ್ ಅನ್ನು ಡ್ಯಾಮೇಜ್ ಮಾಡುತ್ತದೆಯಂತೆ. ಇದರ ಅತೀ ಸೇವನೆ ದೇಹದ ಮೇಲೆ ಉರಿಯೂತದ ಪರಿಣಾಮವನ್ನು ಬೀರುತ್ತದೆ, ಇದು ಯಕೃತ್ತಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.
ಏನಿದು ಕರ್ಕ್ಯುಮಿನ್..?
ಕರ್ಕ್ಯುಮಿನ್ ಅನ್ನುವುದು ಅರಶಿನದಲ್ಲಿರುವ ಒಂದು ಅಂಶವಾಗಿದೆ. ಅರಶಿನಕ್ಕೆ ಹಳದಿ ಬಣ್ಣವನ್ನು ನೀಡುವುದೇ ಈ ಕರ್ಕ್ಯುಮಿನ್ ಎಂಬ ಅಂಶ. ಅರಶಿನದಲ್ಲಿರುವ ಕರ್ಕ್ಯುಮಿನ್ ಇದೀಗ ಲಿವರ್ ಮೇಲೆ ಮಾರಣಾಂತಿಕ ಸಮಸ್ಯೆ ಉಂಟು ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಸಂಶೋಧನೆ ಹೇಳುವುದೇನು?
ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್ ಪ್ರಕಟಿಸಿರುವ ಅಧ್ಯಯನದಲ್ಲಿ ಅರಿಶಿನ ಸೇವನೆಯು ಯಕೃತ್ತಿನ ಹಾನಿಗೆ ಸಂಬಂಧಿಸಿದೆ ಎಂದು ಹೇಳುತ್ತದೆ. ಸಂಶೋಧನಕಾರರು ಇಲಿ ಮೇಲೆ ಪ್ರಯೋಗ ನಡೆಸಿದ್ದು ಇದರಲ್ಲಿ ಲಿವರ್ ಮೇಲೆ ಅರಿಶಿನ ಪರಿಣಾಮ ಬೀರಿರುವುದು ದೃಢಪಟ್ಟಿದೆ.
ಇಲಿಗಳಿಗೆ ನಾಲ್ಕು ಮತ್ತು ಎಂಟು ವಾರಗಳ ಅವಧಿಗೆ ಆಹಾರದಲ್ಲಿ ಕರ್ಕ್ಯುಮಿನ್ ಬೆರೆಸಿ ನೀಡಲಾಗಿತ್ತು. ಈ ಕರ್ಕ್ಯುಮಿನ್ ಇರುವ ಆಹಾರ ಸೇವಿಸಿದ ಇಲಿಗಳಿಗೆ ಲಿವರ್ ಸಮಸ್ಯೆ ಕಾಡಿದೆ. ಪ್ರಯೋಗಕ್ಕೂ ಮೊದಲು ಇಲಿಗಳು ಆರೋಗ್ಯವಾಗಿತ್ತು. ಇನ್ನು ಇಲಿಗಳ ಪೈಕಿ 8 ಇಲಿಗಳು ಕರ್ಕ್ಯುಮಿನ್ ಸೇವನೆಯಿಂದ ಲಿವರ್ ಗೆ ಹಾನಿ ಉಂಟಾಗಿತ್ತು. ಇನ್ನು, ಈ ಪೈಕಿ ಒಂದು ಇಲಿ ಸಾವನಪ್ಪಿದೆ.