ಬೆಂಗಳೂರು : ಸರ್ಕಾರಿ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚುವ ವಿಚಾರದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಎಲ್ಲ ವಿಚಾರಗಳಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿಲ್ಲ ಕಟ್ಟುನಿಟ್ಟಿನ ರಸ್ತೆ ನಿಯಮ, ಪೋಲಿಸ್, ಅಪ್ರಾಪ್ತರಿಂದಲೇ ಕಾನೂನಿಗೆ ಗುದ್ದು
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಎಲ್ಲ ವಿಚಾರಗಳಲ್ಲಿ ಯಾಕೆ ರಾಜಕೀಯ ಮಾಡುತ್ತಿದ್ದಾರೋ ಗೋತ್ತಿಲ್ಲ. ಕೇಸರಿ ಬಣ್ಣ ನಮ್ಮ ರಾಷ್ಟ್ರಧ್ವಜದಲ್ಲಿ ಇಲ್ಲವೇ? ಸ್ವಾಮಿ ವಿವೇಕಾನಂದ ತೊಡುತ್ತಿದ್ದ ವಸ್ತ್ರದ ಬಣ್ಣ ಕೇಸರಿ, ಕೇಸರಿ ಕಂಡರೆ ಅವರಿಗ್ಯಾಕೆ ಅಷ್ಟು ಅಲರ್ಜಿ? ವಿವೇಕಾನಂದ ಹೆಸರಿನಲ್ಲಿ ವಿವೇಕ ಯೋಜನೆ ಮಾಡುತ್ತಿದ್ದೇವೆ. ವಿವೇಕ ಅಂದರೆ ಜ್ಞಾನದ ಸಂಕೇತ ಎಂದು ತಿಳಿಸಿದ್ದಾರೆ.
BIGG NEWS: ಇಸ್ತಾಂಬುಲ್ ಬಾಂಬ್ ಸ್ಫೋಟ : ಶಂಕಿತನನ್ನು ಬಂಧಿಸಿದ ಟರ್ಕಿ ಪೊಲೀಸ್ | Istanbul bombing