ಉತ್ತರ ಪ್ರದೇಶ: ಉತ್ತರ ಪ್ರದೇಶದ ಉನ್ನಾವೊದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 25 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಯುವತಿ ಮನೆಯಲ್ಲಿ ಒಬ್ಬಳೇ ಇದ್ದದ್ದನ್ನು ಗಮನಿಸಿದ ರಾಜ್ ಗೌತಮ್ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನಿಖೆಯ ಸಮಯದಲ್ಲಿ, ವ್ಯಕ್ತಿ ಕೃತ್ಯಕ್ಕೆ ಮೊದಲು ಕಾರ್ಯಕ್ಷಮತೆ ಹೆಚ್ಚಿಸುವ ಮಾತ್ರೆ ಸೇವಿಸಿದ್ದಾಗಿ ಹೇಳಿಕೊಂಡಿದ್ದಾನೆ. ಸಂತ್ರಸ್ತೆಯ ವಿರೋಧದ ನಡುವೆಯೂ ಆಕೆ ಮೂರ್ಛೆ ಹೋಗುವವರೆಗೂ ಮತ್ತು ಆಕೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುವವರೆಗೂ ಅತ್ಯಾಚಾರವೆಸಗಿದ್ದಾನೆ. ರಕ್ತಸ್ರಾವವಾಗಿದ್ದನ್ನು ಕಂಡು ಗಾಬರಿಯಾದ ಗೌತಮ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ನಂತರ, ಆಕೆಯ ಕಿರಿಯ ಸಹೋದರಿ ಮನೆಗೆ ಹಿಂದಿರುಗಿದಾಗ ಸಂತ್ರಸ್ತೆ ಹಾಸಿಗೆಯ ಮೇಲೆ ಪ್ರಜ್ಞಾಹೀನತೆಯನ್ನು ಕಂಡಳು. ಯಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದ್ದು, ಆಕೆಯ ಖಾಸಗಿ ಭಾಗಗಳಲ್ಲಿ ಗಂಭೀರವಾದ ಗಾಯದಿಂದಾಗಿ ಅತಿಯಾದ ರಕ್ತಸ್ರಾವವು ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.