ಮುಂಬೈ: ಕಸ್ಟಮ್ಸ್ನ ಏರ್ ಇಂಟೆಲಿಜೆನ್ಸ್ ಯುನಿಟ್ (ಕಸ್ಟಮ್ಸ್ ಇಲಾಖೆ) ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ 32 ಕೋಟಿ ಮೌಲ್ಯದ 61 ಕಿಲೋ ಚಿನ್ನವನ್ನ ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಏಳು ಆರೋಪಿಗಳನ್ನ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳು ಕತಾರ್ ಏರ್ ವೇಸ್ ವಿಮಾನದಲ್ಲಿ ಮುಂಬೈಗೆ ಬಂದಿದ್ದರು. ಆರೋಪಿಗಳೆಲ್ಲರೂ ಪ್ರಯಾಣಿಕರಾಗಿದ್ದರು. ಭಾರತಕ್ಕೆ ಚಿನ್ನ ತರುವುದಾಗಿ ಹಣದ ಆಮಿಷ ಒಡ್ಡಲಾಗಿದ್ದು, ಆದಾಗ್ಯೂ, ಅವರಿಗೆ ಭಾರತದಲ್ಲಿನ ಕಸ್ಟಮ್ಸ್ ಕಾನೂನುಗಳ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಇವರೆಲ್ಲರೂ ಅಷ್ಟೊಂದು ಚಿನ್ನವನ್ನ ತಂದರು ಎನ್ನಲಾಗ್ತಿದೆ. ಇನ್ನು ಎಲ್ಲಾ ಆರೋಪಿಗಳನ್ನ ಪೊಲೀಸರು ಬಂಧಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
“ಬಂಧಿತ ಆರೋಪಿಗಳು ಚಿನ್ನ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿರುವ ಕೆಲವರ ಹೆಸರನ್ನ ಪೊಲೀಸರಿಗೆ ನೀಡಿದ್ದಾರೆ. ತನಿಖಾ ಸಂಸ್ಥೆ ಆ ವ್ಯಕ್ತಿಗಳ ಮಾಹಿತಿಯನ್ನ ಹೊರತೆಗೆಯುತ್ತಿದೆ” ಎಂದು ಕಸ್ಟಮ್ಸ್ ಪರವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
Viral Video : ‘ವಿಷಪೂರಿತ ಹಾವು’ ರಕ್ಷಿಸಲು ಬಾವಿಗಿಳಿದು ‘ಉರಗ ರಕ್ಷಕ’ ಹರಸಾಹಸ ; ಮೈ ಜುಮ್ಮೆನಿಸುವ ವಿಡಿಯೋ ವೈರಲ್