ಶಿವಮೊಗ್ಗ: ಇಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ( Rashtriya Lok Adalat ) ಹಮ್ಮಿಕೊಳ್ಳಲಾಗಿತ್ತು. ಈ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದಂತ 46,905 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ?
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಇಂದು ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ 7,852 ಪ್ರಕರಣಗಳನ್ನು ಹಾಗೂ 39,053 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 46,905 ರಾಜಿ ಸಂಧಾನ ಮಾಡಿಸುವ ಮೂಲಕ ಇತ್ಯರ್ಥಪಡಿಸಲಾಯಿತು ಎಂದು ತಿಳಿಸಿದೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಎರಡನೇ ಸ್ಥಾನದಲ್ಲಿ ಕರ್ನಾಟಕ
ಇನ್ನೂ ಪ್ರಕರಣಗಳನ್ನು ರಾಜಿ ಮಾಡಿಸಲು ಶಿವಮೊಗ್ಗ ನಗರದಲ್ಲಿ 15 ಪೀಠಗಳನ್ನು, ಭದ್ರಾವತಿಯಲ್ಲಿ 7 ಪೀಠ, ಹೊಸನಗರದಲ್ಲಿ 2 ಪೀಠ, ಸಾಗರದಲ್ಲಿ 4 ಪೀಠ, ಶಿಕಾರಿಪುರದಲ್ಲಿ 3 ಪೀಠ, ಸೊರಬದಲ್ಲಿ 2 ಪೀಠ ಹಾಗೂ ತೀರ್ಥಹಳ್ಳಿಯಲ್ಲಿ 4 ಪೀಠಗಳನ್ನು ರಚಿಸಲಾಗಿತ್ತು ಎಂದು ಹೇಳಿದೆ.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಇಂದಿನ ಲೋಕ ಅದಾಲತ್ ಅನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ಮಾರ್ಗದರ್ಶನದಲ್ಲಿ ನಡೆಸಿ, ರಾಜಿ ಸಂಧಾನ ಮಾಡಲಾಯಿತು. ಈ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿ ಹಾಗೂ ಬ್ಯಾಂಕ್ ಅಧಿಕಾರಿಗಳು, ಅರ್ಜಿದಾರರ ಪರ ವಕೀಲರು, ಕ್ಷಕ್ಷಿದಾರರು ಸಕ್ರೀಯವಾಗಿ ಭಾಗವಹಿಸಿದ್ದರು ಎಂದು ತಿಳಿಸಿದೆ.