ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ವರುಣಾ ಕ್ಷೇತ್ರವನ್ನು ತೊರೆದು, ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ( Karnataka Assembly Election -2023 ) ಬೇರೆ ಕ್ಷೇತ್ರದಲ್ಲಿ ನಿಲ್ಲಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಕ್ಷೇತ್ರದ ಹುಡುಕಾಟದಲ್ಲಿಯೂ ಸಿದ್ಧು ತೊಡಗಿದ್ದಾರೆ ಎಂಬ ಸುದ್ದಿ ಹರಿದಾಡುಟ್ಟಿದೆ. ಈ ನಡುವೆ ಕೋಲಾರದಿಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿದೆ. ಆ ಬಗ್ಗೆ ಅವರು ಏನು ಹೇಳಿದರು ಅಂತ ಮುಂದೆ ಓದಿ.
ALEART: ನಿಮ್ಮ ಮೊಬೈಲ್ ಕಳೆದು ಹೋಗಿದ್ಯಾ? ಪೋನ್ ಪೇ, ಗೂಗಲ್ ಪೇ ಬಗ್ಗೆ ಈ ಎಚ್ಚರಿಕೆ ಕೂಡಲೇ ವಹಿಸಿ.!
ಕೋಲಾರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿದಂತ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ಕೋಲಾರಕ್ಕೆ ಬನ್ನಿ ಅಂತ ನನ್ನನ್ನು ಕರೆದಿದ್ದಾರೆ ಹೋಗುತ್ತಿದ್ದೇನೆ. ಮುನಿಯಪ್ಪ, ರಮೇಶ್ ಕುಮಾರ್ ಬೆಂಬಲಿಗರ ಜೊತೆಗೆ ಈ ಬಗ್ಗೆ ಚರ್ಚಿಸುತ್ತೇನೆ. ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದರು.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ನಾನು ಸ್ಪರ್ಧೆ ಮಾಡುವಂತೆ ಮೂರು ನಾಲ್ಕು ಕ್ಷೇತ್ರಗಳಿಂದ ಒತ್ತಡವಿದೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕು ಎಂಬುದಾಗಿ ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂಬುದಾಗಿ ತಿಳಿಸಿದರು.
BIG NEWS: ಆಸ್ಟ್ರೇಲಿಯಾದ ಮೆಜೆಸ್ಟಿಕ್ ಪ್ರಿನ್ಸೆಸ್ ಕ್ರೂಸ್ ಶಿಪ್ನಲ್ಲಿ 800 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್