ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ( Bangalore Metropolitan Transport Corporation – BMTC ) ಎಸ್ಸಿ, ಎಸ್ಟಿ ಸಮುದಾಯದ ಅಭ್ಯರ್ಥಿಗಳಿಂದ ಉಚಿತ ಲಘು, ಭಾರೀ ವಾಹನ ತರಬೇತಿಗೆ ( Free light, heavy vehicle training ) ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ನೂರು ಅಡಿ ಪ್ರತಿಮೆ ಮಾಡೋದು ಫಿಕ್ಸ್ : ಶಾಸಕ ತನ್ವಿರ್ ಸೇಠ್ ಸ್ಪಷ್ಟನೆ
ಈ ಕುರಿತಂತೆ ಬಿಎಂಟಿಸಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರೀ ವಾಹನ ತರಬೇತಿ ನೀಡಿ, ಚಾಲನ ಅನುಜ್ಞಾಪತ್ರ, ಬ್ಯಾಡ್ಜ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
BIGG NEWS : ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ!
ತರಬೇತಿ ಪಡೆಯಲು ಇಚ್ಚಿಸುವಂತ ಎಸ್ಸಿ, ಎಸ್ಟಿ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಕಂಡಂತ ಕನಿಷ್ಠ ಅರ್ಹತೆ ಹೊಂದಿರಬೇಕು. ಅರ್ಜಿಯ ಜೊತೆಗೆ ಈ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿದೆ.
ಲಘು ವಾಹನ ಚಾಲನಾ ತರಬೇತಿ ( ಕಾರು, ಜೀಪ್ )
- ಕನಿಷ್ಠ 18 ವರ್ಷವಾಗಿರಬೇಕು. 45 ವರ್ಷ ಮೀರಿಬಾರದು
- ಜನ್ಮ ದಿನಾಂಕ ದಾಖಲೆಯಾಗಿ ಜನನ ಪ್ರಮಾಣ ಪತ್ರ, ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಐದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಭಾರೀ ವಾಹನ ಚಾಲನಾ ತರಬೇತಿ ( ಬಸ್ )
- ಕನಿಷ್ಠ 20 ವರ್ಷವಾಗಿರಬೇಕು, ಗರಿಷ್ಠ 45 ವರ್ಷ ಮೀರಿರಬಾರದು.
- ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರೈಸಿರಬೇಕು.
- ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ನೋಟರಿಯಿಂದ ಪ್ರಮಾಣ ಪತ್ರ ಸಲ್ಲಿಸಬೇಕು.
- ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಐದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಈ ತರಬೇತಿಯು 30 ದಿನಗಳು ಆಗಿರುತ್ತದೆ. ತರಬೇತಿಯ ಅವಧಿಯಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಲಘು, ಭಾರೀ ವಾಹನ ತರಬೇತಿಯ ನಿರೀಕ್ಷೆಯಲ್ಲಿರುವಂತ ಎಸ್ಸಿ, ಎಸ್ಟಿ ಸಮುದಾಯದ ಅಭ್ಯರ್ಥಿಗಳು ಮೇಲ್ಕಂಡ ದಾಖಲೆಗಳೊಂದಿಗೆ 2 ಸೆಟ್ ಜೆರಾಕ್ಸ್ ಪ್ರತಿಯ ದಾಖಲೆಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ತರಬೇತಿ ಕೊಠಡಿ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027ಗೆ ದಿನಾಂಕ 31-12-2022ರ ಒಳಗಾಗಿ ಸಲ್ಲಿಸುವುದು.
BIGG NEWS : ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ!
ಈ ಸಂಬಂಧದ ಹೆಚ್ಚಿನ ಮಾಹಿತಿಗಾಗಿ www.mybmtc.com ಗೆ ಭೇಟಿ ನೀಡಿ. ಇಲ್ಲವೇ 080-22537481, 7760576556, 7760991348, 7760979980, 7760991086 ಸಂಖ್ಯೆಗಳಿಗೆ ಸಂಪರ್ಕಿಸಿ.