ಹೈದರಾಬಾದ್:ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದ ಗಾತ್ರ ಮತ್ತು ತೂಕದಲ್ಲಿ ಬದಲಾವಣೆಯಾಗಿದೆ ಎಂಬ ಆರೋಪವನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಮ್ಸ್) ತಳ್ಳಿಹಾಕಿದೆ. ಅಲ್ಲದೇ, ಸುಳ್ಳು ಸುದ್ದಿಯನ್ನು ಯಾವುದೇ ಕಾರಣಕ್ಕೂ ನಂಬದಿರಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದೆ.
BIGG NEWS : ನ.14 ರಿಂದ ‘ಜೆಡಿಎಸ್ ಪಂಚರತ್ನ ರಥಯಾತ್ರೆ ‘ ಆರಂಭ | JDS Pancharatna Rath Yatra
ದೇಗುಲದ ಅಡುಗೆ ಮನೆ “ಪೋಟು’ವಿನಲ್ಲಿ ಪ್ರತಿದಿನ ತಯಾರಾಗುವ ಲಡ್ಡುಗಳನ್ನು ಪ್ರತ್ಯೇಕ ಟ್ರೇಯಲ್ಲಿ ಇಟ್ಟು, ಅದರ ತೂಕವನ್ನು ಅಳೆಯಲಾಗುತ್ತದೆ. ಇಲ್ಲಿನ ಎಲ್ಲ ಪ್ರಕ್ರಿಯೆಯೂ ಪಾರದರ್ಶಕವಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಟಿಟಿಡಿ ಹೇಳಿದೆ. ಶ್ರೀವರಿ ಲಡ್ಡು ಪ್ರಸಾದದ ತೂಕವು ನಿಗದಿಗಿಂತ ಕಡಿಮೆಯಿದೆ ಎಂಬ ವಿಡಿಯೋವೊಂದು ಹರಿದಾಡಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.
BIGG NEWS : ನ.14 ರಿಂದ ‘ಜೆಡಿಎಸ್ ಪಂಚರತ್ನ ರಥಯಾತ್ರೆ ‘ ಆರಂಭ | JDS Pancharatna Rath Yatra