ಬೆಂಗಳೂರು: ಡಾ.ಎಸ್ ವಿದ್ಯಾಶಂಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದಂತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ( Karnataka State Open University – KSOU ) ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ ಹಲ್ಸೆ ಅವರನ್ನು ರಾಜ್ಯ ಸರ್ಕಾರ ( Karnataka Government ) ನೇಮಿಸಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯಪಾಲರು, ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಎಸ್ ವಿದ್ಯಾಶಂಕರ್ ನೇಮಕಗೊಂಡಿದ್ದರು. ಹೀಗಾಗಿ ಕೆ ಎಸ್ ಓ ಯು ಕುಲಪತಿಯಾಗಿದ್ದಂತ ಅವರು ದಿನಾಂಕ 29-09-2022ರಂದು ರಾಜೀನಾಮೆ ನೀಡಿದ್ದರು. ಹೀಗಾಗಿ ಕೆ ಎಸ್ ಓಯು ಕುಲಪತಿ ಹುದ್ದೆ ಖಾಲಿ ಉಳಿದಿತ್ತು ಎಂದಿದ್ದಾರೆ.
ಪ್ರಧಾನಿ ಮೋದಿ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ – DKS
ಇನ್ನೂ ಕುಲಪತಿ ಆಯ್ಕೆಗಾಗಿ ಸಮಿತಿಯ ಸಮಿತಿಯ ಶಿಫಾರಸ್ಸು ಆಧರಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ನೂತನ ಕುಲಪತಿಯನ್ನಾಗಿ ಪ್ರೊ.ಶರಣಪ್ಪ ವೈದ್ಯನಾಥ ಹಲ್ಸೆ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ವಚನದ ಮೂಲಕ ಎದುರಾಳಿಗೆ ಡಿಚ್ಚಿಕೊಟ್ಟ ಡಾಲಿ ಧನಂಜಯ್