ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರದಿಂದ 7 ನೂತನ ವಿವಿಗಳ ರಚನೆಯ ಘೋಷಣೆ ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ( Karnataka Government ) ಈ ನೂತನ ವಿವಿಗಳಿಗೆ ಕುಲಪತಿ ನೇಮಕಕ್ಕೆ ( Appointment of Vice-Chancellor ) ಶೋಧನಾ ಸಮಿತಿಯನ್ನು ರಚನೆ ಮಾಡಿ ಆದೇಶಿಸಿದೆ.
ಪ್ರಧಾನಿ ಮೋದಿ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ – DKS
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದಲ್ಲಿನ ನೂತನ ವಿವಿಗಳಾಗಿರುವಂತ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿವಿಗಳಿಗೆ ನೂತನ ಕುಲಪತಿ ನೇಮಕಕ್ಕೆ ಹೆಸರು ಸೂಚಿಸುವಂತೆ ಶೋಧನಾ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.
ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ: ಕನಕದಾಸರ ವಚನದ ಮೂಲಕ ಎದುರಾಳಿಗೆ ಡಿಚ್ಚಿಕೊಟ್ಟ ಡಾಲಿ ಧನಂಜಯ್
ರಾಜ್ಯ ಸರ್ಕಾರ ನೂತನ ವಿಶ್ವ ವಿದ್ಯಾಲಯಗಳ ( University ) ಕುಲಪತಿಗಳ ನೇಮಕ್ಕೆ ರಚಿಸಿರುವಂತ ಶೋಧನಾ ಸಮಿತಿಯ ಅಧ್ಯಕ್ಷರನ್ನಾಗಿ ಪ್ರೊ.ಬಿ ತಿಮ್ಮೇಗೌಡ ಅವರನ್ನು ನೇಮಿಸಿದೆ. ಇವರ ನೇತೃತ್ವದಲ್ಲಿ ಸದಸ್ಯರನ್ನಾಗಿ ಪ್ರೊ ವಿಜಿ ತಳವಾರ್, ಪ್ರೊ.ಎಸ್ ಬಿ ಹೊಸಮನಿ ಹಾಗೂ ಡಾ.ಬಾಲಸುಬ್ರಹ್ಮಣ್ಯ ಅವರನ್ನು ನೇಮಿಸಿದೆ.