ಬೆಂಗಳೂರು: PSI, ಸಹಾಯಕ ಪ್ರಾಧ್ಯಾಪಕರು, KPTCL ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ ನರೇಂದ್ರ ಮೋದಿ ( PM Narendra Modi ) ಅವರೇ? ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದೀರಿ, ಆದರೆ ಇಲ್ಲಿ “2 ಕೋಟಿಗೆ ಒಂದು ಉದ್ಯೋಗ” ಎಂಬಂತಾಗಿದೆ. ನಿಮ್ಮ #TroubleEngineSarkara ದ ಹುದ್ದೆ ಮಾರಾಟದ ಬಗ್ಗೆ ಮಾತನಾಡುವಿರಾ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಧಾನಿ ಮೋದಿಗೆ ಪ್ರಶ್ನಿಸಿದೆ.
PSI, ಸಹಾಯಕ ಪ್ರಾಧ್ಯಾಪಕರು, KPTCL ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ @narendramodi ಅವರೇ?
ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದೀರಿ, ಆದರೆ ಇಲ್ಲಿ "2 ಕೋಟಿಗೆ ಒಂದು ಉದ್ಯೋಗ" ಎಂಬಂತಾಗಿದೆ.
ನಿಮ್ಮ #TroubleEngineSarkara ದ ಹುದ್ದೆ ಮಾರಾಟದ ಬಗ್ಗೆ ಮಾತನಾಡುವಿರಾ? pic.twitter.com/u9Uizc4T2e
— Karnataka Congress (@INCKarnataka) November 11, 2022
ಈ ಕುರಿತಂತೆ ಸರಣಿ ಟ್ವಿಟ್ ( Twitter ) ಮಾಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ. ನರೇಂದ್ರ ಮೋದಿ ಅವರೇ, ಒಮ್ಮೆಯೂ ನೆರೆ ವೀಕ್ಷಣೆಗೆ ತಾವು ಬರಲಿಲ್ಲ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,500 ಕೋಟಿ ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ. ಕನ್ನಡಿಗರನ್ನು ಅನಾಥರನ್ನಾಗಿಸಿದೆ ನಿಮ್ಮ #TroubleEngineSarkara ಎಂದು ಹೇಳಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ.@narendramodi ಅವರೇ,
ಒಮ್ಮೆಯೂ ನೆರೆ ವೀಕ್ಷಣೆಗೆ ತಾವು ಬರಲಿಲ್ಲ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,500 ಕೋಟಿ ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ.ಕನ್ನಡಿಗರನ್ನು ಅನಾಥರನ್ನಾಗಿಸಿದೆ ನಿಮ್ಮ#TroubleEngineSarkara. pic.twitter.com/FF38mfg1Eo
— Karnataka Congress (@INCKarnataka) November 11, 2022
ಬೆಲೆ ಏರಿಕೆಯ ಜೊತೆಗೆ ನಿಮ್ಮ ಅವೈಜ್ಞಾನಿಕ GST ಹೇರಿಕೆ ಹಾಗೂ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗೃಹಿಣಿರಿಗೆ ಕಣ್ಣೀರು, ಬಡವರ ಹೊಟ್ಟೆಗೆ ತಣ್ಣೀರು, ರೈತರಿಗೆ ರಕ್ತ ಕಣ್ಣೀರು ಎಂಬಂತಾಗಿದೆ #TroubleEngineSarkara ದ GST ಹಾಗೂ ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಧೈರ್ಯವಿದೆಯೇ ನರೇಂದ್ರ ಮೋದಿ ಅವರೇ? ಎಂದು ಪ್ರಶ್ನಿಸಿದೆ.
ಬೆಲೆ ಏರಿಕೆಯ ಜೊತೆಗೆ ನಿಮ್ಮ ಅವೈಜ್ಞಾನಿಕ GST ಹೇರಿಕೆ ಹಾಗೂ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಗೃಹಿಣಿರಿಗೆ ಕಣ್ಣೀರು,
ಬಡವರ ಹೊಟ್ಟೆಗೆ ತಣ್ಣೀರು,
ರೈತರಿಗೆ ರಕ್ತ ಕಣ್ಣೀರು
ಎಂಬಂತಾಗಿದೆ #TroubleEngineSarkara ದ GST ಹಾಗೂ ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಧೈರ್ಯವಿದೆಯೇ @narendramodi ಅವರೇ? pic.twitter.com/nfSxhBa48z— Karnataka Congress (@INCKarnataka) November 11, 2022
ಮಾನ್ಯ ನರೇಂದ್ರ ಮೋದಿ ಅವರೇ, #TroubleEngineSarkara ದ ಕಿರುಕುಳದ ಬಗ್ಗೆ ಗುತ್ತಿದೆದಾರ ಸಂತೋಷ್ ಪಾಟೀಲ್ ಪತ್ರಕ್ಕೆ ತಾವು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಜೀವ ಹೋಯ್ತು. ಗುತ್ತಿಗೆದಾರರು ಭ್ರಷ್ಟ ಸರ್ಕಾರದ 40% ಲೂಟಿಯ ಬಗ್ಗೆ 2 ಬಾರಿ ನಿಮಗೆ ಪತ್ರ ಬರೆದಿದ್ದಾರೆ, ಅವರಿಗೆ ಉತ್ತರ ನೀಡಿವಿರಾ? ಅವರ ಸಮಸ್ಯೆಗೆ ಪರಿಹಾರ ತಂದಿದ್ದೀರಾ? ಎಂದು ಕೇಳಿದೆ.
ಮಾನ್ಯ @narendramodi ಅವರೇ,#TroubleEngineSarkara ದ ಕಿರುಕುಳದ ಬಗ್ಗೆ ಗುತ್ತಿದೆದಾರ ಸಂತೋಷ್ ಪಾಟೀಲ್ ಪತ್ರಕ್ಕೆ ತಾವು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಜೀವ ಹೋಯ್ತು.
ಗುತ್ತಿಗೆದಾರರು ಭ್ರಷ್ಟ ಸರ್ಕಾರದ 40% ಲೂಟಿಯ ಬಗ್ಗೆ 2 ಬಾರಿ ನಿಮಗೆ ಪತ್ರ ಬರೆದಿದ್ದಾರೆ, ಅವರಿಗೆ ಉತ್ತರ ನೀಡಿವಿರಾ? ಅವರ ಸಮಸ್ಯೆಗೆ ಪರಿಹಾರ ತಂದಿದ್ದೀರಾ? pic.twitter.com/Rn8t5izM34
— Karnataka Congress (@INCKarnataka) November 11, 2022
ನೇಮಕಾತಿ ಹಗರಣಗಳು, ವರ್ಗಾವಣೆ ದಂಧೆ. PSI ಹಗರಣ, 40% ಕಮಿಷನ್ ಹಗರಣ. ಸಂತೋಷ್ ಪಾಟೀಲ್ ಆತ್ಮಹತ್ಯೆ, ಈಶ್ವರಪ್ಪ ರಾಜೀನಾಮೆ. ರಸ್ತೆ ಗುಂಡಿಗಳು. ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 50 ಕೋಟಿ. ಯತ್ನಾಳರ ಆರೋಪಗಳು ಇವೆಲ್ಲದರ ಬಗ್ಗೆ ತಮ್ಮ ಭಾಷಣದಲ್ಲಿ ಜಾಗವಿದೆಯೇ ನರೇಂದ್ರ ಮೋದಿ ಅವರೇ? ಎಂದು ಪ್ರಶ್ನಿಸಿದೆ.
◆ನೇಮಕಾತಿ ಹಗರಣಗಳು
◆ವರ್ಗಾವಣೆ ದಂಧೆ
◆PSI ಹಗರಣ
◆40% ಕಮಿಷನ್ ಹಗರಣ
◆ಸಂತೋಷ್ ಪಾಟೀಲ್ ಆತ್ಮಹತ್ಯೆ
◆ಈಶ್ವರಪ್ಪ ರಾಜೀನಾಮೆ
◆ರಸ್ತೆ ಗುಂಡಿಗಳು
◆ಸಿಎಂ ಹುದ್ದೆಗೆ 2,500 ಕೋಟಿ
◆ಮಂತ್ರಿಗಿರಿಗೆ 50 ಕೋಟಿ
◆ಯತ್ನಾಳರ ಆರೋಪಗಳುಇವೆಲ್ಲದರ ಬಗ್ಗೆ ತಮ್ಮ ಭಾಷಣದಲ್ಲಿ ಜಾಗವಿದೆಯೇ @narendramodi ಅವರೇ?#TroubleEngineSarkara pic.twitter.com/V4xjdzAeVS
— Karnataka Congress (@INCKarnataka) November 11, 2022
ಮಾನ್ಯ ನರೇಂದ್ರ ಮೋದಿಯವರೇ, ನಿಮ್ಮ ಮೇಲಿನ ಭರವಸೆಯಿಂದ ಹಿಂದೆ ನಳೀನ್ ಕುಮಾರ್ ಕಟೀಲ್ ಅವರು ಒಂದು ಡಾಲರ್ಗೆ 15 ರೂಪಾಯಿಯಾಗುತ್ತದೆ ಎಂದಿದ್ದರು, ಈಗ 83 ರೂಪಾಯಿಯಾಗಿದೆ. ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ, ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ! ಅವರಿಗೆ ಸಾಂತ್ವಾನ ಹೇಳುವಿರಾ?! ಎಂದು ವಾಗ್ಧಾಳಿ ನಡೆಸಿದೆ.
ಮಾನ್ಯ @narendramodi ಅವರೇ,
ನಿಮ್ಮ ಮೇಲಿನ ಭರವಸೆಯಿಂದ ಹಿಂದೆ @nalinkateel ಅವರು ಒಂದು ಡಾಲರ್ಗೆ 15 ರೂಪಾಯಿಯಾಗುತ್ತದೆ ಎಂದಿದ್ದರು,
ಈಗ 83 ರೂಪಾಯಿಯಾಗಿದೆ.ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ, ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ!
ಅವರಿಗೆ ಸಾಂತ್ವಾನ ಹೇಳುವಿರಾ?!#TroubleEngineSarkara pic.twitter.com/sjGqFTLPV3— Karnataka Congress (@INCKarnataka) November 11, 2022
‘ ನರೇಂದ್ರ ಮೋದಿ ಅವರೇ, ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು. ತಮ್ಮ ಕಚೇರಿ ಕೇಳಿದ ವರದಿ ತಲುಪಿತೇ? #TroubleEngineSarkara ದ ಭ್ರಷ್ಟಾಚಾರದ ದರ್ಶನವಾಯಿತೇ? ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡುವಿರಾ? ಎಂದು ಪ್ರಶ್ನಿಸಿದೆ.
'@narendramodi ಅವರೇ,
ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು.ತಮ್ಮ ಕಚೇರಿ ಕೇಳಿದ ವರದಿ ತಲುಪಿತೇ?#TroubleEngineSarkara ದ
ಭ್ರಷ್ಟಾಚಾರದ ದರ್ಶನವಾಯಿತೇ?ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡುವಿರಾ? pic.twitter.com/pVrZjNZRa7
— Karnataka Congress (@INCKarnataka) November 11, 2022