ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಶೋಧಕ ಆರ್ ಎಲ್ ಕಶ್ಯಪ್ ( Padma Shri awardee RL Kashyap passes away ) ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಸಂಶೋಧಕ ಹಾಗೂ ವೇದ ಪ್ರಸಾರ ಸಾಧನೆಯನ್ನು ತೋರಿದ್ದಂತ ಆರ್ ಎಲ್ ಕಶ್ಯಪ್ ಇನ್ನಿಲ್ಲವಾಗಿದ್ದಾರೆ. ಅವರ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವಂತ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ( Speaker Vishweshwara Hegde Kageri ), ಪದ್ಮಶ್ರೀ ಆರ್.ಎಲ್.ಕಶ್ಯಪ್ ಅವರು ಇಂದು ಸ್ವರ್ಗಸ್ಥರಾದ ವಿಷಯ ತಿಳಿದು ಅತೀವವಾದ ದುಃಖವಾಯ್ತು. ಪ್ರೊಫೆಸರ್ ಶ್ರೀ ಆರ್.ಎಲ್.ಕಶ್ಯಪ್ ರವರು, ಸಾಕ್ಷಿ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ನಾಲ್ಕೂ ವೇದಗಳ 25,000ಕ್ಕೂ ಅಧಿಕ ಮಂತ್ರಗಳನ್ನು ಇಂಗ್ಲೀಷಿಗೆ ಅನುವಾದಿಸಿ 26 ಸಂಪುಟಗಳಲ್ಲಿ ಪ್ರಕಟಿಸಿದ್ದರು ಎಂದು ಹೇಳಿದ್ದಾರೆ.
ವೇದಕ್ಕೆ ಸಂಬಂಧಿಸಿದಂತೆ, 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಹಿಂದಿ, ಇಂಡೋನೇಷಿಯನ್, ಜರ್ಮನಿ ಭಾಷೆಗಳಿಗೆ ಅನುವಾದವಾಗಿವೆ ಎಂದು ತಿಳಿಸಿದ್ದಾರೆ.
ಶ್ರೀಯುತರು, ಶ್ರೀ ಅರಬಿಂದೋ ಹಾಗೂ ಶ್ರೀ ಕಪಾಲಿ ಶಾಸ್ತ್ರಿಗಳ, ಭಾರತೀಯ ಸಂಸ್ಕೃತಿಯ ಕುರಿತಾಗಿ ಕೆಲಸವನ್ನು ಎಡೆಬಿಡದೆ ನಡೆಸಿದ್ದರು. 85 ವರ್ಷ ವಯಸ್ಸಿನ ಡಾ.ಕಶ್ಯಪ್ ಅವರು ಕಿರಿಯರಿಗೆ ಮತ್ತು ಹಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಮೊಟ್ಟಮೊದಲ ಬಂಗಾರದ ಪದಕ ತಂದುಕೊಟ್ಟ ಮಹನೀಯರು ಇವರಾಗಿದ್ದಾರೆ ಎಂದು ಹೇಳಿದ್ದಾರೆ.
BIGG NEWS : ಬೆಂಗಳೂರಿನಲ್ಲಿ ‘ಮೋದಿ ಮೇನಿಯಾ’ : ಸಮಾವೇಶದಲ್ಲಿ ಪ್ರಧಾನಿ ಭಾಷಣದ ಹೈಲೆಟ್ಸ್..ಇಲ್ಲಿದೆ
ಸಂಶೋಧನೆ ಮತ್ತು ವೇದ ಪ್ರಸಾರ ಸಾಧನೆಯನ್ನು ಮೆಚ್ಚಿ, ಕೇಂದ್ರ ಸರ್ಕಾರವು ಇವರಿಗೆ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.