ಹುಬ್ಬಳ್ಳಿ: ರಸ್ತೆಯಲ್ಲಿ ಕೆಟ್ಟು ನಿಂತಿದ್ದಂತ ಲಾರಿಯೊಂದಕ್ಕೆ ಹಿಂಬದಿಯಾಗಿ ಶಾಲಾ ಬಸ್ ( School Bus ) ಒಂದು ಡಿಕ್ಕಿಯಾದ ಪರಿಣಾಮ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಖಾಸಗೀ ಶಾಲೆಯೊಂದರ ಬಸ್, ಅಂಕೋಲಾ ಮಾರ್ಗವಾಗಿ ಸುಂಕಸಾಳದತ್ತ ಪ್ರವಾಸಕ್ಕೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರದ ಅರೆಬೈಲ್ ಘಟ್ಟ ಸಮೀಪ ನಿಂತಿದ್ದಂತ ಲಾರಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬಸ್ ( School Bus Accident ) ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇನ್ನೂ ಶಾಲಾ ಬಸ್ ಅಪಘಾತದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ಕೆಂಪೇಗೌಡರ ಪ್ರತಿಮೆಯ ಖಡ್ಗದ ತೂಕವೇ 4 ಟನ್!: ಇಲ್ಲಿದೆ ಪ್ರತಿಮೆಯ ಇನ್ನೂ ಹಲವು ವಿಶೇಷತೆಗಳ ಮಾಹಿತಿ