ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ( Karnataka Pradesh Congress Party – KPCC ) ಬೆಂಗಳೂರಿಗೆ ಆಗಮಿಸುತ್ತಿರುವಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ( Prime Minister Narendra Modi ) ಸುದೀರ್ಘ ಪತ್ರವನ್ನು ಬರೆಯಲಾಗಿದೆ. ಕೆಪಿಸಿಸಿಯಿಂದ ಬರೆದಿರುವಂತ ಪತ್ರದಲ್ಲಿ ಯಾವೆಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಗಿದೆ ಎನ್ನುವ ಬಗ್ಗೆ ಪತ್ರದ ಸಂಪೂರ್ಣ ಸಾರಾಂಶ ಮುಂದಿದೆ ಓದಿ.
ಕರ್ನಾಟಕ ಕಾಂಗ್ರೆಸ್ ನಿಂದ ( Karnataka Congress ) ಪ್ರಧಾನಮಂತ್ರಿಗಳಿಗೆ ಬರೆದ ಪತ್ರದ ಸಾರಾಂಶ
ಸನ್ಮಾನ್ಯ ಪ್ರಧಾನಮಂತ್ರಿಗಳೇ,
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಆಗಮಿಸುತ್ತಿರುವ ತಮಗೆ ಆದರದ ಸ್ವಾಗತ ಕೋರುತ್ತಾ ಈ ಪತ್ರವನ್ನು ಆರಂಭಿಸುತ್ತೇನೆ. 2013ರ ಡಿಸೆಂಬರ್ 14ರಂದು ಕರ್ನಾಟಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟು ಕರ್ನಾಟಕ ಹಾಗೂ ಕನ್ನಡಿಗರ ಇತಿಹಾಸ, ಘನತೆಯನ್ನು ಗುರುತಿಸುವ ನಿಟ್ಟಿನಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿತ್ತು. ಈ ಬಗ್ಗೆ ನಮಗೆ ಹೆಮ್ಮೆಯೂ ಇದೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಯಾದ ಸಚಿವ ಗೋವಿಂದ ಕಾರಜೋಳ
ನೀವು ನವೆಂಬರ್ 11, 2022ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯದಲ್ಲಿನ ದಯನೀಯ ಸ್ಥಿತಿ ಹಾಗೂ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯತನವನ್ನು ತಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯವಾಗಿದೆ.
ಕರ್ನಾಟಕದಲ್ಲಿ ಜನಾದೇಶಕ್ಕೆ ವಿರುದ್ಧವಾಗಿ ಬಿಜೆಪಿ ಸರ್ಕಾರ ಅದಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಬೇಕಿದ್ದ ಸರ್ಕಾರ ತಾನು ಕೊಟ್ಟಿದ್ದ ಭರವಸೆಗಳನ್ನೂ ಈಡೇರಿಸದೇ, ಭ್ರಷ್ಟಾಚಾರದಲ್ಲಿ ಮುಳುಗಿರುವುದು ರಾಜ್ಯಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಈ ಸರ್ಕಾರವನ್ನು ಮಾಧ್ಯಮಗಳಲ್ಲಿ 40% ಸರ್ಕಾರ ಎಂದು ಕರೆಯಲಾಗುತ್ತಿದೆ. ಪಿಎಸ್ಐ ನೇಮಕಾತಿ ಹಗರಣ, ಗುತ್ತಿಗೆದಾರರ ಹಣ ಪಾವತಿಯಲ್ಲಿ ಅಕ್ರಮ, ಮಠಮಾನ್ಯಗಳಿಗೆ ನೀಡುವ ಅನುದಾನದಲ್ಲಿ ಹಗರಣದಲ್ಲಿ ಸರ್ಕಾರದ ಸಚಿವರುಗಳು ಭಾಗಿಯಾಗಿರುವ ಆರೋಪ ಕೇಳಿಬಂದಿದೆ.
ರಾಜ್ಯ ಸರ್ಕಾರದ ಲೋಪಗಳ ಬಗ್ಗೆ ‘ಕಾಂಗ್ರೆಸ್’ನಿಂದ ಪ್ರಧಾನಿಗೆ ಪತ್ರ – ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಈ ಬ್ರಹ್ಮಾಂಡ ಭ್ರಷ್ಟಾಚಾರ ರಾಜ್ಯದ ಶಿಕ್ಷಕರು, ಯುವಕರು, ವ್ಯಾಪಾರಸ್ಥ ವರ್ಗ ಹಾಗೂ ಜನ ಸಾಮಾನ್ಯರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ 40% ಸರ್ಕಾರದಿಂದ ತೊಂದರೆ ಅನುಭವಿಸಿರುವವರು ನೀವು ಮಧ್ಯಪ್ರವೇಶಿಸಬೇಕು ಎಂದು ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಸರ್ಕಾರದ ಭ್ರಷ್ಟಾಚಾರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಆದರೂ ನಿಮ್ಮ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ. ಇತ್ತೀಚೆಗೆ ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ಅವರು ಪತ್ರ ಬರೆದಿದ್ದು, ಈ ಭ್ರಷ್ಟಾ ಸರ್ಕಾರದ ಆಡಳಿತದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ದಯಾ ಮರಣಕ್ಕೆ ಅನುಮತಿ ಕೋರಿದ್ದಾರೆ. ಶಿಕ್ಷಣ ಸಂಸ್ಥೆಗಳ ಒಕ್ಕೂಟ RUPSA ಕೂಡ 40% ಸರ್ಕಾರದ ಕಿರುಕುಳದ ಬಗ್ಗೆ ನಿಮಗೆ ಪತ್ರ ಬರೆದಿದ್ದು, ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾ ಖಾವೂಂಗಾ ನಾಖಾನೇದೂಂಗ ಎಂದು ಭರವಸೆ ಕೊಟ್ಟಿದ್ದ ನೀವು ಈ ವಿಚಾರಗಳಲ್ಲಿ ಮೌನವಾಗಿರುವುದನ್ನು ನೋಡಿ ಆಘೈತವಾಗಿದೆ.
ಭ್ರಷ್ಟಾಚಾರದ ಜತೆಗೆ ಬಿಜೆಪಿ ಸರ್ಕಾರ ತಾನು 2018ರ ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಪ್ರಣಾಳಿಕೆಯಲ್ಲಿ ನಿಮ್ಮ ಪಕ್ಷ 600 ಭರವಸೆಗಳನ್ನು ನೀಡಿತ್ತು. ಇದರಲ್ಲಿ ಶೇ.90ರಷ್ಟು ಭರವಸೆಗಳು ಈಡೇರಿಲ್ಲ.
ರೈತರ ಸಾಲಮನ್ನಾ ಆಗಿಲ್ಲ, ಸ್ತ್ರೀ ಉನ್ನತಿ ನಿಧಿಯಿಂದ ಮಹಿಳೆಯರಿಗೆ ಅನುಕೂಲ ಸಿಕ್ಕಿಲ್ಲ. ಅವರು ಉಚಿತ ಸ್ಮಾರ್ಟ್ ಫೋನ್ ಇದುವರೆಗೂ ಪಡೆದಿಲ್ಲ. 1300 ಕೋಟಿ ವೆಚ್ಚದಲ್ಲಿ ಪಿಯು ಕಾಲೇಜುಗಳ ನಿರ್ಮಾಣವಾಗಿಲ್ಲ. ಇನ್ನು ರಾಜ್ಯದ ಯುವಕರಿಗಾಗಿ ನೀಡಿದ್ದ 161 ಭರವಸೆಗಳ ಪೈಕಿ 143 ಭರವಸೆ ಈಡೇರಿಸಿಲ್ಲ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕಾ ಅಭಿವೃದ್ಧಿ ಭರಸೆಗಳು ಜಾರಿಯಾಗಿಲ್ಲ.
BIG NEWS: ನಾನು ಟಗರು ಸೂ..ಮಗಂದು ಬಲು ಗಟ್ಟಿ ಅಂದಿದ್ದು ನಿಜ – ಕಾಂಗ್ರೆಸ್ ಮುಖಂಡ ಕೆ.ಮುಕುಡಪ್ಪ
ಸಚಿವರುಗಳಿಗೆ ಭ್ರಷ್ಟಾಚಾರ ಪರಮ ಆದ್ಯತೆಯಾಗಿದ್ದು, ಆಡಳಿತದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಯಂತ್ರ ಹದಗೆಟ್ಟಿದೆ. ರಾಜ್ಯದಲ್ಲಿ ಹಣದುಬ್ಬರ ಪ್ರಮಾಣ 7.62% ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 38.7%ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ರೈತರ ಕೃಷಿ ವೆಚ್ಚ ಆಕಾಶದೆತ್ತರಕ್ಕೆ ಜಿಗಿದಿದೆ. ಅವರ ಬೆಳೆಗೆ ಸರಿಯಾದ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಬೆಳೆ ನಷ್ಟ ಪರಿಹಾ ಹಾಗೂ ಬೆಳೆ ಸಾಲ ಮನ್ನಾ ಸರಿಯಾಗಿ ಸಿಗದ ಪರಿಣಾಮ ರೈತರ ಸ್ಥಿತಿ ಶೋಚನೀಯವಾಗಿದೆ.
ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತಾಗಿ ‘ನಿಮ್ಮ ಹತ್ರ ಇದೆಯಾ ಉತ್ತರ?’ ಆಂದೋಲನದ ಭಾಗವಾಗಿ ನಾವು ಇದುವರೆಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ 70 ಪ್ರಶ್ನೆಗಳನ್ನು ಕೇಳಿದ್ದು, ಸರ್ಕಾರ ಈ ವಿಚಾರದಲ್ಲಿ ಕಿವುಡುತನ ಪ್ರದರ್ಶಿಸಿದೆ. ರಾಜ್ಯದಲ್ಲಿನ ಪರಿಸ್ಥಿತಿ ಹದಗೆಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಂಡು ತೀವ್ರ ಬೇಸರವಾಗಿದೆ. ರಾಜ್ಯದಲ್ಲಿ ಜನರ ಪರದಾಟ ಹೆಚ್ಚಾಗುತ್ತಿದ್ದು, ಸರ್ಕಾರ ಮಾತ್ರ ತನ್ನ ಮೌನ ಮುಂದುವರಿಸಿದೆ.
2013ರಿಂದ 2018ರವರೆಗೆ ರಾಜ್ಯದಲ್ಲಿ ಬಲಿಷ್ಠ ಹಾಗೂ ಸಧೃಡ ಸರ್ಕಾರ ಇತ್ತು. ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಭರವಸೆಗಳ ಪೈಕಿ ಶೇ.95ರಷ್ಟು ಭರವಸೆಗಳನ್ನು ಈಡೇರಿಸುವುದರ ಜತೆಗೆ ತನ್ನ ಅವಧಿ ಮುಕ್ತಾಯವಾಗುವ ಮುನ್ನ 30 ಜನಪರ ಯೋಜನೆಗಳನ್ನು ಹೆಚ್ಚುವರಿಯಾಗಿ ನೀಡಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನ ಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ ಹಾಗೂ ಕ್ಷೀರ ಭಾಗ್ಯ ಯೋಜನೆಗಳನ್ನು ನೀಡಿತ್ತು. ಜತೆಗೆ ಕಾಂಗ್ರೆಸ್ ಸರ್ಕಾರ ಆರ್ಟಿಕಲ್ 371ಜೆ ಜಾರಿ ಮಾಡಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿತು. ಆದರೆ ಈ ಮಂಡಳಿಗೆ ಸರಿಯಾದ ಪ್ರಮಾಣದಲ್ಲಿ ಅನುದಾನ ನೀಡಲು ಬಿಜೆಪಿ ಸರ್ಕಾರ ವಿಫಲವಾಗಿದೆ.
ಇನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಬಾಕಿ ಉಳಿದಿದೆ. ಜತೆಗೆ ಇದನ್ನು 9ನೇ ಷೆಡ್ಯೂಲ್ ನಲ್ಲಿ ಸೇರಿಸಬೇಕಿದೆ. ಇದರ ಬದಲಾಗಿ ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.24ರಷ್ಟು ಏರಿಕೆ ಕಂಡಿವೆ. ಇನ್ನು ಪಿರಿಶಿಷ್ಟ ವಿದ್ಯಾರ್ಥಿಗಳಿಗೆ 4500 ಕೋಟಿ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಗಿಲ್ಲ.
ಕೇವಲ ರಾಜ್ಯ ಬಿಜೆಪಿ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರ ಕೂಡ ಕರ್ನಾಟಕ ರಾಜ್ಯಕ್ಕೆ ದ್ರೋಹ ಬಗೆದಿದೆ. ರಾಜ್ಯಕ್ಕೆ ಮಹತ್ವದ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆಗಳ ಜಾರಿ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಹಲವು ಬಾರಿ ಮನವಿ ಮಾಡಿದರು ರಾಷ್ಟ್ರೀಯ ಯೋಜನೆ ಎಂದು ಘೋಷಣೆಯನ್ನೂ ಮಾಡಿಲ್ಲ. ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಜನರು ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಅವರಿಗೆ ನೀವು ಕೊಟ್ಟಿದ್ದೇನು? ಕೇವಲ ಮೋಸ ಮಾತ್ರ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕರ್ನಾಟಕ ರಾಜ್ಯದ ಘನತೆಗೆ ಮಾಡಲಾಗಿರುವ ಅಪಮಾನವಾಗಿದೆ. ನಿಮ್ಮ ಸರ್ಕಾರ ಭ್ರಷ್ಟಾರ, ದುರಾಡಳಿತದಿಂದ ಮಾತ್ರ ಜನಸಾಮಾನ್ಯರಿಗೆ ಹೊರೆಯಾಗಿಲ್ಲ, ಬದಲಿಗೆ ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಸುಗೆಗೂ ಪೆಟ್ಟು ನೀಡಿದ್ದೀರಿ. ಕಳೆದ ಮೂರು ವರ್ಷಗಳಲ್ಲಿ ನಿಮ್ಮ ಸರ್ಕಾರದ ದುರಾಡಳಿತದಲ್ಲಿ ನಡೆದ ಕೋಮು ಗಲಭೆಗಳಿಗೆ 163 ಜೀವಗಳು ಬಲಿಯಾಗಿವೆ. ಬಿಜೆಪಿ ನಾಯಕರು ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದು, ಬೇರೆ ಭಾಷೆಗೆ ಆದ್ಯತೆ ನೀಡುತ್ತಿದ್ದಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಕನ್ನಡದ ಪ್ರಮುಖ ವ್ಯಕ್ತಿಗಳ ಇತಿಹಾಸವನ್ನು ತಿರುಚಲಾಗಿದೆ. ಇನ್ನು ಕೇಂದ್ರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ಪದೇ ಪದೆ ಮನವಿ ಮಾಡಿದ್ದರೂ ಅದನ್ನೂ ನಿರ್ಲಕ್ಷಿಸಲಾಗಿದೆ.
ನೀವು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರ ಈ ಎಲ್ಲ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕು ಎಂದು ಈ ಪತ್ರದ ಮೂಲಕ ಆಗ್ರಹಿಸುತ್ತೇವೆ. ಒಂದುವೇಳೆ ಈ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದರೆ ಆಮೂಲಕ ನೀವು ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಮಾಡಿದಂತಾಗುತ್ತದೆ. ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಗೆ ಧಕ್ಕೆಯಾಗಲಿದೆ.
BIG NEWS: ನಾನು ಟಗರು ಸೂ..ಮಗಂದು ಬಲು ಗಟ್ಟಿ ಅಂದಿದ್ದು ನಿಜ – ಕಾಂಗ್ರೆಸ್ ಮುಖಂಡ ಕೆ.ಮುಕುಡಪ್ಪ
ಅಂತಿಮವಾಗಿ ಕರ್ನಾಟಕ ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯ ನಿಲ್ಲುವವರೆಗೂ, ಅವರಿಗೆ ಸಿಗಬೇಕಾದ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಮಗೆ ತಿಳಿಸಲು ಬಯಸುತ್ತೇವೆ.
ಕರ್ನಾಟಕದ ಹೆಮ್ಮೆಯ ಪುತ್ರನಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.