ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ ಪೆಕ್ಟ್ ನೇಮಕಾತಿ ಪರೀಕ್ಷೆಯ ಅಕ್ರಮ ( PSI Recruitment Scam ) ಸಂಬಂಧ, ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿತ ಆರೋಪಿ ಅಮೃತ್ ಪೌಲ್ ಅವರಿಗೆ ನಿವಾಸದ ಮೇಲೆ ದಾಳಿ ನಡೆಸಿ ಬಿಗ್ ಶಾಕ್ ನೀಡಿದ್ದಾರೆ.
ಇಂದು ಆರೋಪಿ ಎಡಿಜಿಪಿ ಅಮೃತ್ ಪೌಲ್ ಹಾಗೂ ಶಾಂತಕುಮಾರ್ ಸೇರಿದಂತೆ ಹಲವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ( ED Officer Raid ) ನಡೆಸಿದ್ದಾರೆ. ಸಹಕಾರ ನಗರದಲ್ಲಿರುವಂತ ಎಡಿಜಿಪಿ ಅಮೃತ್ ಪೌಲ್ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
BREAKING NEWS : ‘ಮುರುಘಾ ಶ್ರೀ’ ಪೋಕ್ಸೋ ಕೇಸ್ : ಒಡನಾಡಿ ಸಂಸ್ಥೆಯ ನಾಲ್ವರು ಸಿಬ್ಬಂದಿ ಪೊಲೀಸ್ ವಶಕ್ಕೆ , ವಿಚಾರಣೆ
ಅಂದಹಾಗೇ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾರೀ ಅಕ್ರಮ ಹಣ ವರ್ಗಾವಣೆ ಕೇಸ್ ಕೂಡ ಇಡಿಯಿಂದ ದಾಖಲಿಸಿತ್ತು. ಈ ಪ್ರಕರಣದಲ್ಲಿಯೇ ಇಂದು ಅಮೃತ್ ಪೌಲ್ ನಿವಾಸ ಸೇರಿದಂತೆ 11 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
BIG NEWS: ಮೋದಿ ಬಂದು ಹೋದಮೇಲೆ ರಸ್ತೆ ಕಿತ್ತೋಗುತ್ತೆ: ಬಿಜೆಪಿಯ ತರಾತುರಿ ಗುಂಡಿ ಮುಚ್ಚೋ ಕೆಲಸಕ್ಕೆ ಸಿದ್ಧು ವ್ಯಂಗ್ಯ