ಕಲಬುರಗಿ: ದೇವರಿಗೆ ನಾನಾ ರೀತಿಯಲ್ಲಿ ಹರಕೆ ತೀರಿಸುವುದನ್ನು ನೋಡಿದ್ದೇವೆ. ಆದರೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಗೋಳಾ ಗ್ರಾಮದ ಗೋಳೇದ ಲಕ್ಕಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
BIGG NEWS: ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್
ಭಕ್ತರು, ಲಕ್ಕಮ್ಮನ ಬೆನ್ನಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇದೇ ವೇಳೆ ಭಕ್ತರು ಚಪ್ಪಲಿ ಹರಕೆಯನ್ನೂ ತೀರಿಸುತ್ತಾರೆ. ಈ ರೀತಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದ ಗೋಳೇದ ಲಕ್ಕಮ್ಮ ಜಾತ್ರೆ ವಿಶಿಷ್ಟ ಹಾಗೂ ಸಂಭ್ರಮದಿಂದ ಜರುಗಿತು.
ಜಗತ್ತಿನ ಯಾವುದೇ ದೇವರಿಗೂ ಮುಖಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಗೋಳೇದ ಲಕ್ಕಮ್ಮನಿಗೆ ಮಾತ್ರ ಭಕ್ತರು ಬೇರೆ ರೀತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
BIGG NEWS: ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್
ಗೋಳೇದ ಲಕ್ಕಮ್ಮನಿಗೆ ಬೆನ್ನಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಾಂಸಾಹಾರ ಸೇವಿಸಿದಳೆಂಬ ಕಾರಣಕ್ಕೆ, ಧುತ್ತರಗಾಂವ ಗ್ರಾಮದ ಈರಣ್ಣ ಲಕ್ಕಮ್ಮನ ಬೆನ್ನು ಹತ್ತಿ ಬಂದಿದ್ದ. ಈರಣ್ಣನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡೋಡಿ ಬರುವ ಲಕ್ಕಮ್ಮ ಗೋಳಾ ಗ್ರಾಮದ ಬಳಿ ಪಲ್ಟಿಯಾಗಿ ಬೀಳುತ್ತಾಳೆ. ಹಾಗೆ ಆಕೆ ಬೋರಲು ಬಿದ್ದ ಸ್ಥಿತಿಯಲ್ಲಿಯೇ ಭಕ್ತರು ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ.
ಎರಡು ವರ್ಷ ಕೋವಿಡ್ ನಿರ್ಬಂದ ಬಳಿಕ ಗೋಳೇದ ಲಕ್ಕಮ್ಮನ ಜಾತ್ರೆ ಈ ಬಾರಿ ಸಂಭ್ರಮ, ಸಡಗರದ ಮಧ್ಯೆ ಅದ್ದೂರಿಯಾಗಿ ಜರುಗಿತು. ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಕೆಲ ಭಕ್ತರು ಚಪ್ಪಲಿಗಳನ್ನು ಹರಕೆಯ ರೂಪದಲ್ಲಿ ಅರ್ಪಿಸಿದರು. ಮತ್ತೆ ಕೆಲ ಭಕ್ತರು ಚಪ್ಪಲಿಯನ್ನು ತಲೆಗೆ ಬಡಿದುಕೊಂಡು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
BIGG NEWS: ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್
ಸಸ್ಯಾಹಾರಿ ಭಕ್ತರು ಹೋಳಿಗೆ ಅರ್ಪಿಸಿದರೆ, ಮಾಂಸಾಹಾರ ಸೇವಿಸುವ ಭಕ್ತರು ಮಾತ್ರ ಕುರಿ ಮತ್ತು ಕೋಳಿಗಳನ್ನು ಬಲಿಕೊಟ್ಟು ಲಕ್ಕಮ್ಮನಿಗೆ ರಕ್ತ ತರ್ಪಣ ಮಾಡಿದರು. ವಿಶಿಷ್ಟ ಪೂಜೆಗೆ ಹೆಸರುವಾಸಿಯಾಗಿರುವ ಗೋಳೇದ ಲಕ್ಕಮ್ಮನ ಜಾತ್ರೆ ಸಡಗರ, ಸಂಭ್ರಮಗಳಿಂದ ನೆರವೇರಿತು. ಊರಿನಿಂದ ಕಳಶದ ಮೆರವಣಿಗೆಯ ಬಂದ ನಂತರ ದೇವಸ್ಥಾನದಲ್ಲಿ ಯಾರೂ ಉಳಿದುಕೊಳ್ಳುವುದಿಲ್ಲ. ಜನಸಾಮಾನ್ಯರ ಜಾತ್ರೆಯ ನಂತರ ರಾತ್ರಿ ವೇಳೆ ದೆವ್ವಗಳು ಲಕ್ಕಮ್ಮನ ಜಾತ್ರೆ ನಡೆಸುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ಇಂದು ರಾತ್ರಿ ಯಾವ ಭಕ್ತರೂ ದೇವಸ್ಥಾನದ ಕಡೆ ಸುಳಿಯುವುದಿಲ್ಲ. ಇದು ಈ ಜಾತ್ರೆಯ ವಿಶೇಷ.
BIGG NEWS: ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್