ಶಿವಮೊಗ್ಗ : ನಗರ ಉಪವಿಭಾಗ-2 ರ ಘಟಕ-5 ರ ವ್ಯಾಪ್ತಿಯಲ್ಲಿನ ಎನ್ಟಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸ ಪರಿವರ್ತಕ ಅಳವಡಿಸುವ ಕಾಮಗಾರಿ ಮತ್ತು ಎಂ.ಎಫ್.-3, ಎನ್ಟಿ ರಸ್ತೆ 11 ಕೆವಿ ಮಾರ್ಗದ ನಿರ್ವಹಣೆ ಇರುವ ಕಾರಣ ನವೆಂಬರ್.13 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಎನ್ಟಿ ರಸ್ತೆ, ಮಾರ್ನಮಿ ಬೈಲು, ಭಾರತಿ ಕಾಲೋನಿ, ಬಿ.ಹೆಚ್.ರಸ್ತೆ, ಪಂಚವಟಿ ಕಾಲೋನಿ, ಜೆ.ಸಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
BIGG NEWS: ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
ಮತದಾರರ ಪಟ್ಟಿಯನ್ನು ಪರಿಶೀಲಿಸುವಂತೆ ಮತದಾರರಲ್ಲಿ ಮನವಿ
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಕ್ಕೆ ಸಂಬಂಧಿಸಿದಂತೆ, 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗಳನ್ನು ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳು ದಿನಾಂಕ: 12-11-2022, 20-11-2022, 03-12-2022 ಹಾಗೂ 04-12-2022 ರಂದು ತಮ್ಮ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಹಾಜರಿದ್ದು ಕಾರ್ಯ ನಿರ್ವಹಿಸಲಿದ್ದಾರೆ.
BIGG NEWS : `SC-ST’ ಸಮುದಾಯದವರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ದಾಖಲೆಗಳು ಕಡ್ಡಾಯ
ಈ ಸಂದರ್ಭದಲ್ಲಿ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಹಾಜರಾಗಿ ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ.
ಯಾವುದೇ ನ್ಯೂನತೆ ಇದ್ದಲ್ಲಿ ಸರಿಪಡಿಸಲು ನಮೂನೆ-8 ರಲ್ಲಿ ಅಥವಾ ಮತದಾರರು ತಮ್ಮ ಮೊಬೈಲ್ನ VOTER HELPLINE (VHL) ನಲ್ಲಿ ನಮೂನೆ-8 ರಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಕ್ಲೈಮು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 09-11-2022 ರಿಂದ 08-12-2022 ರವರೆಗೆ ಅವಕಾಶವಿರುತ್ತದೆ.
ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು 113-ಶಿವಮೊಗ್ಗ ವಿಧಾನಸಭಾ ಕಷೇತ್ರದ ಮತದಾರರ ನೋಂದಣಾಧಿಕಾರಿಗಳು ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ ಕೋರಿದ್ದಾರೆ.