ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಅನುಮತಿ ನೀಡಲಾಗಿದೆ. ಈ ಮೂಲಕ ಟಿಪ್ಪು ಜಯಂತಿಯನ್ನು ಆಚರಿಸುದಕ್ಕೆ ( Tipu Jayanti celebrations ) ಅವಕಾಶ ನೀಡಲಾಗಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ( hubballi idgah maidan ) ಟಿಪ್ಪು ಜಯಂತಿ ಆಚರಣೆಗೆ ಅವಕಾಶವನ್ನು ಕೋರಿ ಪಾಲಿಕೆಗೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿರುವಂತ ಪಾಲಿಕೆಯು ಅವಕಾಶ ನೀಡಿದೆ.
ಈ ಹಿಂದೆ ಗಣೇಶ ಪ್ರತಿಷ್ಠಾಪನೆಗೆ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದ್ರೇ ಈ ಸಂಬಂಧ ಹೈಕೋರ್ಟ್ ನಲ್ಲಿ ಮತ್ತೊಂದು ಕೋಮಿನಿಂದ ಪ್ರಶ್ನಿಸಲಾಗಿತ್ತು. ಅಂತಿಮವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಷಯ ಮಹಾನಗರ ಪಾಲಿಕೆ ಆಯುಕ್ತರ ವಿವೇಚನೆಗೆ ಬಿಟ್ಟಿದ್ದು ಎಂದು ಹೈಕೋರ್ಟ್ ಷರತ್ತು ಬದ್ಧ ಆದೇಶ ನೀಡಿತ್ತು. ಈ ಬಳಿಕ ಪಾಲಿಕೆ ಆಯುಕ್ತರು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದರು.
ಇದೀಗ ಗಣೇಶ ಪ್ರತಿಷ್ಠಾಪನೆಯ ಬಳಿಕ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸೋದಕ್ಕೆ ಪಾಲಿಕೆಯು ಅನುಮತಿ ನೀಡಿದೆ. ಇದಷ್ಟೇ ಅಲ್ಲದೇ ಎಲ್ಲಾ ಆಚರಣೆಗೂ ಪಾಲಿಕೆ ಅವಕಾಶ ಮಾಡಿಕೊಡಲಾಗಿದೆ.
ಅಂದಹಾಗೇ ಗಣೇಶ ಪ್ರತಿಷ್ಠಾಪನೆಯ ಬಳಿಕ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೋರಿ ಪಾಲಿಕೆಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದಲ್ಲದೇ ಇತರೆ ಆಚರಣೆಗೂ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಟಿಪ್ಪು ಜಯಂತಿ ಸೇರಿದಂತೆ ಎಲ್ಲಾ ರೀತಿಯ ಆಚರಣೆಯನ್ನು ಈದ್ಗಾ ಮೈದಾನದಲ್ಲಿ ಆಚರಿಸಲು ಪಾಲಿಕೆ ಅನುಮತಿ ನೀಡಿದೆ.