ಬೆಂಗಳೂರು: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಅರ್ಧ ವರ್ಷವಾದರೂ ಪಠ್ಯಪುಸ್ತಕ ( Text Book ) ಪೂರೈಕೆ ಆಗಿಲ್ಲ ಎಂಬುದು ಸುಳ್ಳು. ಬೇಡಿಕೆ ಸಲ್ಲಿಸದ ಖಾಸಗೀ ಶಾಲೆಯಲ್ಲಿ ಸಮಸ್ಯೆ ಆಗಿದೆ ಹೊರತು, ಬೇರೆ ಎಲ್ಲಿಯೂ ಆಗಿಲ್ಲ ಎಂಬುದಾಗಿ ಶಿಕ್ಷಣ ಇಲಾಖೆ ( Education Department ) ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಠೀಕರಣ ಬಿಡುಗಡೆ ಮಾಡಿದ್ದು, 2022-23ನೇ ಸಾಲಿಗೆ SATS ಮೂಲಕ ಬೇಡಿಕೆಯನ್ನು ಡಿಸೆಂಬರ್-2021ರ ತಿಂಗಳಿನಲ್ಲಿ ಪಡೆದು, ಸರ್ಕಾರಿ ಮತ್ತು ಅನುದಾನಿತ ಎಲ್ಲಾ ಶಾಲೆಗಳಿಗೆ ಬೇಡಿಕೆ ಅನ್ವಯ ಪಠ್ಯಪುಸ್ತಕಗಳನ್ನು ಮುದ್ರಿಸಿ, ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಹೇಳಿದೆ.
BIGG NEWS : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿಗಾಗಿ ಅರ್ಜಿ ಆಹ್ವಾನ
ಪಠ್ಯಪುಸ್ತಕ ಬೇಡಿಕೆ ಸಲ್ಲಿಸುವಂತ ಸಮಯದಲ್ಲಿ ಎಲ್ಲಾ ಖಾಸಗೀ ಶಾಲೆಗಳಿಗೂ ಶೇ.10ರಷ್ಟು ಮುಂಗಡ ಪಾವತಿಸಿ, ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ 1,36,29,468 ಮಾರಾಟ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿ, ಶೇ.10ರಷ್ಟು ಮುಂಗಡ ಪಾವತಿಸಿದ್ದ ಎಲ್ಲಾ ಖಾಸಗಿ ಶಾಲೆಗಳಿಗೂ ಬೇಡಿಕೆ ಅನುಸಾರ ಪಠ್ಯಪುಸ್ತಕಗಳನ್ನು ಮುದ್ರಿಸಿ, ಸಕಾಲದಲ್ಲಿ ಸರಬರಾಜು ಮಾಡಲಾಗಿದೆ ಎಂದು ಹೇಳಿದೆ.
ನಿಗದಿತ ಸಮಯದಲ್ಲಿ ಹಣ ಪಾವತಿಸಿ, ಮಾರಾಟ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸದೇ ಇದ್ದ ಕೆಲವು ಶಾಲೆಗಳವರು ಪಠ್ಯಪುಸ್ತಕಗಳನ್ನು ನೀಡಲು ಮನವಿ ಮಾಡಿದರು. ಈ ಕಾರಣದಿಂದ SATSನಲ್ಲಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿ, ಒಟ್ಟು 17,710 ಅನುದಾನ ರಹಿತ ಖಾಸಗಿ ಶಾಲೆಗಳ ಪೈಕಿ 1826 ಶಾಲೆಯವರು ಆಗಸ್ಟ್-2022ರ ತಿಂಗಳಿನಲ್ಲಿ ಹೆಚ್ಚುವರಿ 5,46,547 ಪಠ್ಯಪುಸ್ತಕಗಳಿಗೆ ಮತ್ತೊಮ್ಮೆ ಬೇಡಿಕೆ ಸಲ್ಲಿಸಿ, ಹಣ ಪಾವತಿಸಿದ್ದಾರೆ. ಅವುಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಒಂದು ವಾರದೊಳಗೆ ಖಾಸಗಿ ಶಾಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ: ಸಂಪೂರ್ಣ ತನಿಖೆಯಾಗುವವರೆಗೆ ತೀರ್ಮಾನಕ್ಕೆ ಬರಬಾರದು – ಸಿಎಂ ಬೊಮ್ಮಾಯಿ
ಈ ಎಲ್ಲಾ ಹಿನ್ನಲೆಯಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಅರ್ಧ ವರ್ಷವಾದರೂ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿಲ್ಲ ಎಂಬ ವರದಿಯಾಗಿರುವುದು ತಡವಾಗಿ ಬೇಡಿಕೆ ಸಲ್ಲಿಸಿದ ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂಬುದಾಗಿ ಸ್ಪಷ್ಟೀಕರಿಸಿದೆ.