ಶಿವಮೊಗ್ಗ : ಜಿಲ್ಲಾ ಪಂಚಾಯಿತಿಯ ಸ್ವೀಪ್ (ಸಿಸ್ಟೆಮ್ಯಾಟಿಕ್ ವೋಟರ್ ಎಜುಕೇಷನ್ ಆಂಡ್ ಎಲೆಕ್ಟೊರಲ್ ಪಾರ್ಟಿಸಿಪೇಷನ್) ವತಿಯಿಂದ ಮತದಾರರ ಪಟ್ಟಿಯ ( Voter List ) ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ರ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲು ಇಂದು ಬೆಳಿಗ್ಗೆ ನಗರದ ಡಿವಿಎಸ್ ವೃತ್ತದಿಂದ ಕಾಲ್ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಕಾಲ್ನಡಿ ಜಾಥಾಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಆರ್. ಸೆಲ್ವಮಣಿ ( Deputy Commissioner Dr. R. Selvamani ) ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ ಸಿಇಓ ಎನ್.ಡಿ.ಪ್ರಕಾಶ್ ಇವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಹೊಸನಗರದಲ್ಲಿ ‘ಹೃದಯ ವಿದ್ರಾವಕ’ ಘಟನೆ : ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಿದ್ದ ಮಗ ಸಾವು
ಎನ್ಸಿಸಿ, ಎನ್ಎಸ್ಎಸ್ ಸ್ವಯಂ ಸೇವಕರು, ಕಾಲೇಜು ವಿದ್ಯಾರ್ಥಿಗಳು ( College Students ) ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಅರಿವು ಮೂಡಿಸುವ ಸಂದೇಶ ಫಲಕಗಳೊಂದಿಗೆ ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.
ನೋಂದಾಯಿಸಿ, ನೊಂದಾಯಿಸಿ… ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.., ಖಚಿತಪಡಿಸಿ, ಖಚಿತಪಡಿಸಿ.., ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೆಂದು.. ಬಂದಿತು.. ಬಂದಿತು.. ಮತದಾರರ ಪಟ್ಟಿ ಪರಿಷ್ಕರಣೆ.. ಹೆಸರು ನೋಂದಾಯಿಸುವುದು ನಮ್ಮೆಲ್ಲರ ಹೊಣೆ.., ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಲು VHA App ಬಳಸಿ ಇತ್ಯಾದಿ ಮಾಹಿತಿಯುಳ್ಳ ಸಂದೇಶ ಫಲಕಗಳನ್ನು ಕಾಲ್ನಡಿಗೆ ಜಾಥಾದಲ್ಲಿ ಪ್ರದರ್ಶಿಸಲಾಯಿತು.
BIGG NEWS : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿಗಾಗಿ ಅರ್ಜಿ ಆಹ್ವಾನ
ಕಾಲ್ನಡಿಗೆ ಜಾಥಾ ಡಿವಿಎಸ್ ವೃತ್ತದಿಂದ ಆರಂಭಗೊಂಡು ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಕುವೆಂಪು ರಂಗಮಂದಿರದ ಬಳಿ ಸಾಗಿತು.
ಕಾಲ್ನಡಿಗೆ ಜಾಥಾದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಲಿ, ಡಿಡಿಪಿಯು ಕೃಷ್ಣಪ್ಪ, ಡಿಡಿಪಿಐ ಪರಮೇಶ್ವರಪ್ಪ, ಇತರೆ ಅಧಿಕಾರಿಗಳು, ಎನ್ಸಿಸಿ, ಎನ್ಎಸ್ಎಸ್, ಮತದಾರರ ಜಾಗೃತಿ ಸಂಘದ ಸದಸ್ಯರು, ವಿದ್ಯಾರ್ಥಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.
ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ: ಸಂಪೂರ್ಣ ತನಿಖೆಯಾಗುವವರೆಗೆ ತೀರ್ಮಾನಕ್ಕೆ ಬರಬಾರದು – ಸಿಎಂ ಬೊಮ್ಮಾಯಿ