ಬೆಂಗಳೂರು: ನಕಲಿ ದಾಖಲೆ ಪಡೆದು ಪಾಸ್ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ.
ಬೆಂಗಳೂರಿನ ಬಸವನಗುಡಿ ಪೊಲೀಸರಿಂದ 9 ಆರೋಪಿಗಳ ಬಂಧನವಾಗಿದೆ. ನಕಲಿ ಅಂಕಪಟ್ಟಿ, ಟಿಸಿ, ಛಾಪಾ ಕಾಗದ, ಆಧಾರ್ ಕಾರ್ಡ್ ಬಳಸಿ ಆರೋಪಿಗಳು ಗ್ರಾಹಕರಿಂದ 1 ಪಾಸ್ಪೋರ್ಟ್ಗೆ 45 ಸಾವಿರ ರೂ. ಪಡೆಯುತ್ತಿದ್ದರು. ಇತ್ತೀಚೆಗೆ ಒಬ್ಬ ಕಳ್ಳ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಹಾರಿದ್ದ ನಿದರ್ಶನವೂ ಇದೆ. ಶಿವಮೊಗ್ಗದ ಓರ್ವ ಕೊಲೆ ಆರೋಪಿ ದುಬೈಗೆ ಹೋಗಿರುವ ಮಾಹಿತಿ ಇದೆ. ಕೊಲೆ ಪ್ರಕರಣದ ತನಿಖೆ ವೇಳೆ ಈ ನಕಲಿ ಪಾಸ್ಪೋರ್ಟ್ ಜಾಲ ಬೆಳಕಿಗೆ ಬಂದಿದೆ.
ತಾವೇ ಮಾರ್ಕ್ಸ್ ಕಾರ್ಡ್, ಟಿಸಿ ಸಿದ್ಧಪಡಿಸುತ್ತಿದ್ದ ಆರೋಪಿಗಳು ಆಧಾರ್ ಕಾರ್ಡ್ನಲ್ಲಿ ಫೋಟೋ ಎಡಿಟ್ ಮಾಡಿ ಕಾರ್ಡ್ ನಕಲು ಮಾಡುತ್ತಿದ್ದರು. ಇದರಿಂದ ಆರೋಪಿಗಳು ಭಾರತ, ಶ್ರೀಲಂಕಾದ ಪಾಸ್ಪೋರ್ಟ್ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ನಕಲಿ ಟಿಸಿ, ನಕಲಿ ಆಧಾರ್ ಕಾರ್ಡ್, ನಕಲಿ ಮಾರ್ಕ್ಸ್ ಕಾರ್ಡ್, ಅಸಲಿ ಪಾಸ್ಪೋರ್ಟ್ಗಳನ್ನು ಬಸವನಗುಡಿ ಪೊಲೀಸರುವಶಕ್ಕೆ ಪಡೆದಿದ್ದಾರೆ.