ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಪರೇಷನ್ ಸಮಯದಲ್ಲಿ ವೈದ್ಯರು ನೀಲಿ ಅಥವಾ ಹಸಿರು ಬಟ್ಟೆಗಳನ್ನೇ ಏಕೆ ಧರಿಸುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಎಲ್ಲರಿಗೂ ಇಂತಹ ಪ್ರಶ್ನೆ ಎಂದಾದರೂ ಸಹ ಕಾಡಿರುತ್ತೆ. ಅದಕ್ಕೆ ಕಾರಣವೇನೆಂದು ಇಲ್ಲಿ ನೋಡೋಣ ಬನ್ನಿ…
ಆಸ್ಪತ್ರೆಗಳಲ್ಲಿ ವೈದ್ಯರು ಸಾಮಾನ್ಯವಾಗಿ ಬಿಳಿಬಣ್ಣದ ಕೋಟ್ಗಳನ್ನು ಧರಿಸುತ್ತಾರೆ. ಆದ್ರೆ, ಆಪರೇಷನ್ ಸಮಯದಲ್ಲಿ ಮಾತ್ರ ನೀಲಿ ಅಥವಾ ಹಸಿರು ಬಟ್ಟೆಗಳನ್ನು ಧರಿಸುತ್ತಾರೆ. ಅಷ್ಟೇ ಅಲ್ದೇ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಬಿಡ್ ಶೀಟ್ಗಳು ಸಹ ಹಸಿರು ಬಣ್ಣ ಅಥವಾ ಕಡು ನೀಲಿ ಬಣ್ಣದ ಬಟ್ಟೆಯನ್ನೇ ಬಳಸುತ್ತಾರೆ. ಇದಕ್ಕೆಲ್ಲಕ್ಕೂ ಕೆಲವು ವೈಜ್ಞಾನಿಕ ಕಾರಣಗಳಿವೆ.
ಈ ಎರಡು ಬಣ್ಣದ ಬಟ್ಟೆಗಳು ಕೆಂಪು ಬಣ್ಣಕ್ಕೆ ವಿರುದ್ಧವಾಗಿದೆ. ಆಪರೇಷನ್ ಸಮಯದಲ್ಲಿ ರೋಗಿ ದೇಹದ ಒಂದು ಹನಿ ರಕ್ತ ಹಾಸಿಗೆಯ ಮೇಲೆ ಅಥವಾ ಬಟ್ಟೆಯ ಮೇಲೆ ಬಿದ್ದರೆ, ಅದು ಬೇಗ ವೈದ್ಯರ ಕಣ್ಣಿಗೆ ಗೋಚರವಾಗುತ್ತದೆ. ಇನ್ನೊಂದು ಕಾರಣವೆಂದರೆ, ನೀವು ಬೇರೆ ಬಣ್ಣದ ಬಟ್ಟೆಯನ್ನು ತುಂಬಾ ಹೊತ್ತು ನೋಡಿದರೆ ನಿಮ್ಮ ಕಣ್ಣಿಗೆ ಆಯಾಸ ಆಗುತ್ತದೆ ಆದರೆ ಈ ಹಸಿರು ಬಣ್ಣ ಮತ್ತು ನೀಲಿ ಬಣ್ಣವನ್ನು ಹೆಚ್ಚು ಒತ್ತು ನೋಡಿದರೆ ನಿಮ್ಮ ಕಣ್ಣಿಗೆ ಯಾವುದೇ ರೀತಿಯ ಆಯಾಸವಾಗುವುದಿಲ್ಲ.
ನೀವು ಗುಲಾಬಿ ಅಥವಾ ಕೆಂಪು ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ. ಇದು ನಮ್ಮ ಕಣ್ಣನ್ನು ಆಯಾಸಗೊಳಿಸಿದಂತೆ ಮಾಡುತ್ತದೆ. ಆಪರೇಷನ್ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆಯನ್ನು ಬಳುವುದಿಲ್ಲ. ಏಕೆಂದರೆ, ಬಿಳಿ ಬಣ್ಣದ ಬಟ್ಟೆ ಮೇಲೆ ರಕ್ತದ ಕಲೆಯಾದ್ರೆ, ನಂತ್ರ ವಾಶ್ ಮಾಡುವಾಗ ಅದು ಹೆಚ್ಚಾಗಿ ಹೋಗುವುದಿಲ್ಲ. ಇದ್ರಿಂದ ಬಿಳಿ ಬಣ್ಣದ ಬಟ್ಟೆಯನ್ನು ಮರು ಬಳಕೆ ಮಾಡಲು ಸಾಧ್ಯವಾಗೋದಿಲ್ಲ. ಆದ್ರೆ, ಹಸಿರು ಅಥವಾ ನೀಲಿ ಬಣ್ಣದ ಬಟ್ಟೆಯಲ್ಲಿ ಅಷ್ಟಾಗಿ ಕೆಂಪು ಬಣ್ಣದ ಕೆಲ ಕಾಣುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಹೆಚ್ಚಾಗಿ ಹಸಿರು ಬಣ್ಣ ಮತ್ತು ನೀಲಿಬಣ್ಣದ ಬಟ್ಟೆಯನ್ನು ಬಳಕೆ ಮಾಡಲಾಗುತ್ತದೆ.
ದಾರಿ ಮಧ್ಯೆ ಕೆಟ್ಟು ನಿಂತ ಬಸ್ ತಳ್ಳಲು ಸಹಾಯ ಮಾಡಿದ ಕೇಂದ್ರ ಸಚಿವ ʻಅನುರಾಗ್ ಠಾಕೂರ್ʼ | WATCH VIDEO
BIGG BREAKING NEWS : ಮಳಲಿ ಮಸೀದಿ ವಿವಾದ : ವಿಹೆಚ್ ಪಿ ಅರ್ಜಿ ಸ್ವೀಕರಿಸಿದ ಕೋರ್ಟ್