ಭರತ್ಪುರ : ರಾಜಸ್ಥಾನದ ಭರತ್ಪುರ ಜಿಲ್ಲೆಯ ದೀಗ್ ತಹಸಿಲ್ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆ ನಗ್ಲಾ ಮೋತಿಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದ ಮೀರಾ ಕುಂಟಾಲ್ (ಆರವ್) ಈಗ ಹುಡುಗನಾಗಿ ಲಿಂಗ ಬದಲಾವಣೆ ಮಾಡಿಕೊಂಡಿದದಾರೆ. ಅಂದ ಹಾಗೇ ಜನರು ಇನ್ನು ಮುಂದೆ ಅವಳನ್ನು ಮೀರಾ ಎಂದು ಕರೆಯುವುದಿಲ್ಲ, ಆದರೆ ಆರವ್ ಕುಂಟಾಲ್ ಎಂದು ಕರೆಯುತ್ತಾರೆ. ಮೀರಾ ಹುಡುಗಿಯಾಗಿ ಜನಿಸಿದಳು, ಆದರೆ ಅವಳ ಮುಖಭಾವಗಳು ಹುಡುಗರಂತೆ ಇದ್ದವು ಎನ್ನಲಾಗಿದೆ.
ವೈದ್ಯರ ಪ್ರಕಾರ ಇದನ್ನು ಡಿಸ್ಫೋರಿಯಾ ಎಂದು ಕರೆಯಲಾಗುತ್ತದೆ. ಡಿಸೆಂಬರ್ 25, 2019 ರಿಂದ 2021 ರವರೆಗೆ ಮೀರಾ ದೆಹಲಿ ಆಸ್ಪತ್ರೆಯಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದ್ದು. ಈ ಮೂರು ವರ್ಷಗಳಲ್ಲಿ, ಮೀರಾಳ ಶಿಷ್ಯೆ ಕಲ್ಪನಾ ಸಂಪೂರ್ಣವಾಗಿ ಆಖೆ ಕಾಳಜಿ ವಹಿಸಿದಳು. ಈ ಸಮಯದಲ್ಲಿ, ಅವರಿಬ್ಬರೂ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿದೆ ಇತ್ತೀಚೆಗೆ, ನವೆಂಬರ್ 4 ರಂದು, ಕಲ್ಪನಾ ಮತ್ತು ಆರವ್ ವಿವಾಹವಾಗಿದ್ದಾರೆ ಎನ್ನಲಾಗಿದೆ.
ಕಲ್ಪನಾ ಭರವಸೆಯ ಕಬಡ್ಡಿ ಆಟಗಾರ್ತಿ: ಡೀಗ್ ನ ನಗ್ಲಾ ಮೋತಿ ಗ್ರಾಮದ ನಿವಾಸಿಯಾದ ಕಲ್ಪನಾ, 10ನೇ ತರಗತಿಯಲ್ಲಿ ಓದುತ್ತಿರುವಾಗ ಕಬಡ್ಡಿ ತರಬೇತುದಾರಿ ಮೀರಾ ಕುಂಟಾಲ್ (ಈಗ ಆರವ್) ಅವರ ನಿರ್ದೇಶನದಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಬಾರಿಗೆ ಕಬಡ್ಡಿಯಲ್ಲಿ ಆಟವಾಡಿದ್ದರು. ಕಲ್ಪನಾ 11-12 ನೇ ತರಗತಿಯಲ್ಲಿ ರಾಜ್ಯ ಮಟ್ಟದಲ್ಲಿ ಆಡಿದರು ಮತ್ತು 2021 ರಲ್ಲಿ ಪದವಿ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಶಕ್ತಿಯನ್ನು ತೋರಿಸಿದರು. ಕಲ್ಪನಾ ಈಗ ಜನವರಿಯಲ್ಲಿ ಅಂತಾರಾಷ್ಟ್ರೀಯ ಪ್ರೊ ಕಬಡ್ಡಿಯಲ್ಲಿ ಭಾಗವಹಿಸಲು ದುಬೈಗೆ ಪ್ರಯಾಣಿಸಲಿದ್ದಾರೆ.
2016 ರಿಂದ ಸರ್ಕಾರಿ ಮಾಧ್ಯಮಿಕ ಶಾಲೆಯ ನಾಗಲಾ ಮೋತಿಯಲ್ಲಿ ದೈಹಿಕ ಶಿಕ್ಷಕಿಯಾಗಿರುವ ಮೀರಾ ಕುಂಟಾಲ್ ಕೂಡ ಅತ್ಯುತ್ತಮ ಆಟಗಾರ್ತಿಯಾಗಿದ್ದಾರೆ. ಮೀರಾ ಕ್ರಿಕೆಟ್ನಲ್ಲಿ ಮೂರು ಬಾರಿ ಮತ್ತು ಹಾಕಿಯಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಈಗ ಆರವ್ ತನ್ನ ಶಾಲೆಯ ವಿದ್ಯಾರ್ಥಿಗಳಿಗೆ ಕಬಡ್ಡಿ ಮತ್ತು ವಾಲಿಬಾಲ್ ತರಬೇತಿ ನೀಡುತ್ತಿದ್ದಾರೆ.