ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, 3-4 ದಿನಗಳಲ್ಲಿ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚನೆ ಆದೇಶ ಹೊರಬೀಳುವ ಸಾಧ್ಯತೆ ಇದೆ.
BIGG NEWS : `ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ’ ಹೆಸರು ಬದಲಾವಣೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
ವೇತನ ಭತ್ಯೆ, ಪರಿಷ್ಕರಣೆ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ 3-4 ದಿನಗಳಲ್ಲಿ 7 ನೇ ವೇತನ ಆಯೋಗ ರಚನೆ ಆದೇಶ ಹೊರಬೀಳಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ಫೆಬ್ರವರಿ 2023 ರ ಬಜೆಟ್ ನಲ್ಲೇ 7 ನೇ ವೇತನ ಆಯೋಗ ಪರಿಷ್ಕರಣೆ ತೀರ್ಮಾಣವನ್ನು ಸರ್ಕಾರ ಪ್ರಕಟಿಸುವ ನಿರೀಕ್ಷೆಯಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಪ್ರವಾಸದಿಂದ ಮರಳಿದ ಬಳಿಕ 7 ನೇ ವೇತನ ಆಯೋಗ ರಚನೆ ಆದೇಶ ಹೊರಬೀಳಿದೆ ಎಂದು ತಿಳಿಸಿದ್ದಾರೆ.