ನವದೆಹಲಿ: ವಿಶ್ವದಾದ್ಯಂತ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಭಾರತದಲ್ಲಿಯೂ ಗಣನೀಯ ಇಳಿಕೆಯನ್ನು ಕೊರೋನಾ ಕಂಡಿದೆ. ಈಗಾಗಲೇ ಕೋವಿಡ್ ಲಸಿಕೆಯ ( Covid Vaccine ) ಮೊದಲ ಹಾಗೂ ಎರಡನೇ ಡೋಸ್ ನೀಡಿಕೆಯ ಕಾರಣ, ಸೋಂಕು ಗಣನೀಯವಾಗಿ ಇಳಿಕೆಯತ್ತ ಸಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಕೋವಿಡ್ ಗೆ ಸಂಜೀವಿನಿಯಾಗಿದ್ದಂತ ಲಸಿಕೆಯನ್ನು ಈಗ ಕೇಳುವವರೇ ಇಲ್ಲದಂತೆ ಆಗಿದೆ.
BREAKING: ಶಾಸಕ ರೇಣುಕಾಚಾರ್ಯ ತಮ್ಮನ ಪುತ್ರ ಸಾವು ಪ್ರಕರಣ: ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರ ಭೇಟಿ, ವಿಚಾರಣೆ
ಹೌದು ಕೋವಿಡ್ ಗೆ ಸಂಜೀವಿನಿಯಾಗಿದ್ದಂತ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು ( Covaxine ) ಕೇಳುವವರೇ ಇಲ್ಲದಂತೆ ಆಗಿದೆ. ಹೀಗಾಗಿಯೇ 5 ಕೋಟಿ ಡೋಸ್ ವ್ಯರ್ಥವಾಗುವ ಹಂತಕ್ಕೆ ತಲುಪಿದೆ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ದೇಶದಲ್ಲಿ ಬಹುತೇಕ ಜನರು ಎರಡು ಡೋಸ್ ಕೋವಿಡ್ ಲಸಿಕೆ ( Corona Vaccine ) ಪಡೆದಿರೋ ಕಾಣರದಿಂದಾಗಿಯೇ, ಲಸಿಕೆಗೆ ಬೇಡಿಕೆ ಕುಸಿತ ಕಂಡಿದೆ. ಆದರೂ ವಾರ್ಷಿಕವಾಗಿ ಒಂದು ಬಿಲಯನ್ ಉತ್ಪಾದನೆ ಗುರಿಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್ ಬಯೋಟೆಕ್ ಕಂಪನಿಯ ಬಳಿಯಲ್ಲಿ, ಈಗ 20 ಕೋಟಿ ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ. ಈ ಲಸಿಕೆಯಲ್ಲಿ 5 ಕೋಟಿ ಡೋಸ್ ಅವಧಿ 2023ರ ವರ್ಷಾರಂಭದಲ್ಲಿ ಅಂತ್ಯಗೊಳ್ಳಲಿದೆ. ಇದರಿಂದ ಕಂಪನಿಗೆ ಭಾರೀ ನಷ್ಟ ಕೂಡ ಉಂಟಾಗಲಿದೆ.
ಭಾರತದಲ್ಲಿ ಈವರೆಗೆ 219.17 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಶೇ.90ರಷ್ಟು ಮಂದಿ ಎರಡು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಹೀಗಾಗಿ ಕೋವಿಡ್ ಸೋಂಕಿನ ಸಂಖ್ಯೆ ಕೂಡ ಕುಸಿತಗೊಂಡಿದೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶದಿಂದ ತಿಳಿದು ಬಂದಿದೆ.