ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ( Congress Party ) ಭಾರತ್ ಜೋಡೋ ಯಾತ್ರೆಗೆ ಟಕ್ಕರ್ ನೀಡೋದಕ್ಕಾಗಿ ಜನಸಂಕಲ್ಪ ಯಾತ್ರೆಯನ್ನು ರಾಜ್ಯದಲ್ಲಿ ಆರಂಭಿಸಲಾಗಿತ್ತು. ಈ ಯಾತ್ರೆಯನ್ನು ಕನ್ನಡ ರಾಜ್ಯೋತ್ಸವ ಹಾಗೂ ಹೂಡಿಕೆದಾರರ ಸಮಾವೇಶದ ಕಾರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಇಂದಿನಿಂದ ಮತ್ತೆ ಜನಸಂಕಲ್ಪ ಯಾತ್ರೆ ( BJP Jan Sankalpa Yatra ) ಆರಂಭಗೊಳ್ಳಲಿದೆ.
ಹೌದು ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಇಂದಿನಿಂದ ಮುಂದುವರೆಯಲಿದೆ. ಇಂದು ಉಡುಪಿ ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದೆ. ಇದಲ್ಲದೇ ಈ ತಿಂಗಳ 20ರಂದು ಬಳ್ಳಾರಿಯಲ್ಲಿ ಎಸ್ ಟಿ ಹಾಗೂ ನ.30ರಂದು ಮೈಸೂರಿನಲ್ಲಿ ಎಸ್ಸಿ ಸಮಾವೇಶ ಕೂಡ ನಡೆಸಲು ಬಿಜೆಪಿ ಸಜ್ಜಾಗಿದೆ.
BIGG NEWS : ರಾಜ್ಯದ ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಶೀಘ್ರವೇ `ಡೀಸೆಲ್ ಸಬ್ಸಿಡಿ’ ಖಾತೆಗೆ ಜಮಾ
ಈ ಬಗ್ಗೆ ಮಾತನಾಡಿರುವಂತ ಸಿಎಂ ಬೊಮ್ಮಾಯಿ ನಮ್ಮ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದ್ದು, ಡಿಸೆಂಬರ್ ಅಂತ್ಯದವರೆಗೆ ರಾಜ್ಯಾಧ್ಯಂತ ಯಾತ್ರೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.