ಬೆಂಗಳೂರು: ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು ಅಂಥ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ಇರುವ ಆರ್ಟಿ ನಗರ ನಿವಾಸದ ಬಳಿ ಮಾತನಾಡುತ್ತ ಈ ಬಗ್ಗೆ ಹೇಳಿದರು, ಇದೇ ವೇಳೆ ಅವರು ಮಾತನಾಡಿ, ಕೇವಲ 7 ಸೆಕೆಂಡ್ನಲ್ಲಿ ಆನ್ಲೈನ್ ಮೂಲಕ ನೀಡಿರುವ ಪಟ್ಟಿಯನ್ನು ನೀಡಿದರೆ ಯಾವ ರೀತಿ ಆಗಿದೆ ಅಂಥ ತಿಳಿದು ಬರುತ್ತಿದೆ, ಈ ನಿಟ್ಟಿನಲ್ಲಿ, . ಅದರ ಬಗ್ಗೆ ತನಿಖೆ ಸಮಗ್ರ ತನಿಖೆ ನಡೆಸಲಾಗುತ್ತದೆ ಅಂತ ತಿಳಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿಯವರಿಗೆ ಸೋಲಾರ್ನಿಂದ ವಿದ್ಯುತ್ ಉತ್ಪಾದನೆಗೆ ನೀಡಿರುವ ಪರವಾನಗಿಯಲ್ಲಿ ಆಗಿರುವ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಅಂತ ಅವರು ಆರೋಪಿಸಿದರು. ಅಂದ ಹಾಗೇ ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಬರೀ ಏಳೇ ಸೆಕೆಂಡ್ಗೆ ಒಂದು ಆನ್ಲೈನ್ ಅರ್ಜಿ ಹೇಗೆ ಸಲ್ಲಿಕೆಯಾಗಲಿದೆ ಅಂತ ಆಗ ಪ್ರಶ್ನೆ ಮಾಡಲಾಗುತ್ತಿತ್ತು.