ಮೆಲ್ಬೋರ್ನ್ಸ್ : ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಗ್ರೂಪ್ 2ರ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿದೆ. ಈ ಮೂಲಕ ಭಾರತ ತಂಡ ಸೆಮಿಫೈನಲ್ ಗೆ ಪ್ರವೇಶ ಪಡೆದಿದೆ.
ಅಡಿಲೆಡ್ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್ಲೆಂಡ್ಸ್ 13 ರನ್ಗಳ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕ ಸೋತ ಪರಿಣಾಮ ಟೀಮ್ ಇಂಡಿಯಾ ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದ ಫಲಿತಾಂಶದ ಮೇಲೆ ಆಫ್ರಿಕಾ ಸೆಮೀಸ್ ಲೆಕ್ಕಚಾರ ನಿಂತಿದೆ. ಪಾಕ್ ಗೆದ್ದರೆ ಸೆಮಿ ಫೈನಲ್ ರೇಸ್ನಿಂದ ಆಫ್ರಿಕಾ ಹೊರ ಬೀಳಲಿದೆ.
ನೆದರ್ಲ್ಯಾಂಡ್ಸ್ ವಿರುದ್ಧ ಸೋತ ನಂತರ, ದಕ್ಷಿಣ ಆಫ್ರಿಕಾ ಈಗ ಸೆಮಿಫೈನಲ್ ರೇಸ್ನಿಂದ ಹೊರಗುಳಿದಿದೆ. ಪಾಕಿಸ್ತಾನ ತಂಡವು ಈಗ ಬಾಂಗ್ಲಾದೇಶವನ್ನು ಸೋಲಿಸಿದರೆ, ಸೆಮಿಫೈನಲ್ ಗೆ ಟಿಕೆಟ್ ಅವರ ಕೈಯಲ್ಲಿರುತ್ತದೆ. ಅದೇ ಸಮಯದಲ್ಲಿ, ಬಾಂಗ್ಲಾದೇಶವು ಪಾಕಿಸ್ತಾನವನ್ನು ಸೋಲಿಸಿದರೆ, ಅವರು ಸೆಮಿಫೈನಲ್ಗೆ ಹೋಗುತ್ತಾರೆ. ಏಕೆಂದರೆ, ಈ ಎರಡನ್ನೂ ಯಾರು ಗೆಲ್ಲುತ್ತಾರೋ ಅವರು 6 ಅಂಕಗಳನ್ನು ಮತ್ತು ದಕ್ಷಿಣ ಆಫ್ರಿಕಾವು 5 ಅಂಕಗಳನ್ನು ಹೊಂದಿರುತ್ತದೆ.
ದಕ್ಷಿಣ ಆಫ್ರಿಕಾ ಔಟ್, ಸೆಮಿಫೈನಲ್ ಗೆ ಭಾರತ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿ 13 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತು.