ಚೆನ್ನೈ: ಸಿಮೆಂಟ್ ಕಂಪನಿಗಳು ನವೆಂಬರ್ನಲ್ಲಿ ಪ್ರತಿ ಚೀಲಕ್ಕೆ 10 ರಿಂದ 30 ರೂಪಾಯಿಗಳವರೆಗೆ ಬೆಲೆ ಏರಿಕೆ ಮಾಡಲು ಯೋಜಿಸುತ್ತಿವೆ. ಕಳೆದ ತಿಂಗಳು ಪ್ರತಿ ಸಿಮೆಂಟ್ ಚೀಲದ ಬೆಲೆ ಸುಮಾರು 3 ರಿಂದ 4 ರೂಪಾಯಿ ಹೆಚ್ಚಳವಾಗಿದೆ ಎಂದು ಎಮ್ಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಹೇಳಿದೆ.
BIGG BREAKING NEWS : ಅತ್ಯಾಚಾರ ಆರೋಪ : ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅರೆಸ್ಟ್
2022 ರ ಅಕ್ಟೋಬರ್ನಲ್ಲಿ ಸರಾಸರಿ ಭಾರತದಾದ್ಯಂತ ಪ್ರತಿ ಸಿಮೆಂಟ್ ಚೀಲದ ದರ ಸುಮಾರು 3 ರಿಂದ 4 ರೂಪಾಯಿ ಜಾಸ್ತಿಯಾಗಿದೆ ಎಂದು ಎಮ್ಕೆ ಗ್ಲೋಬಲ್ ಇತ್ತೀಚಿನ ವಲಯದ ವರದಿಯಲ್ಲಿ ತಿಳಿಸಿದೆ.
ತಿಂಗಳಿನಿಂದ ತಿಂಗಳಿಗೆ (MoM) ಆಧಾರದ ಮೇಲೆ, ದೇಶದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬೆಲೆಗಳು ಶೇ 2 ರಿಂದ 3 ರಷ್ಟು ಮತ್ತು ಪಶ್ಚಿಮದಲ್ಲಿ ಸುಮಾರು ಶೇಕಡಾ ಒಂದರಷ್ಟು ಹೆಚ್ಚಳವಾಗಿವೆ. ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ ಶೇ 1 ರಿಂದ 2ರಷ್ಟು ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಸಿಮೆಂಟ್ ಕಂಪನಿಗಳು ನವೆಂಬರ್ 22 ರಂದು ದೇಶದಲ್ಲೆಡೆ ಪ್ರತಿ ಸಿಮೆಂಟ್ ಚೀಲದ ಬೆಲೆಯನ್ನು 10 ರಿಂದ 30 ರೂಪಾಯಿಗಳವರೆಗೆ ಏರಿಸಲು ಯೋಜಿಸಿವೆ. ಆದರೆ ವಾಸ್ತವದಲ್ಲಿ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬುದು ಮುಂದಿನ ಕೆಲ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಎಂಕೆ ಗ್ಲೋಬಲ್ ಹೇಳಿದೆ. ವರದಿಯ ಪ್ರಕಾರ, ಮಾನ್ಸೂನ್ ವಿಳಂಬ ನಿರ್ಗಮನ ಮತ್ತು ಹಬ್ಬದ ರಜಾದಿನಗಳ ಕಾರಣದಿಂದಾಗಿ ಕಾರ್ಮಿಕರ ಕೊರತೆಯು ಅಕ್ಟೋಬರ್ 22 ರಲ್ಲಿ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಮುಂಬರುವ ವಾರಗಳಲ್ಲಿ ಬೇಡಿಕೆಯು ಸುಧಾರಿಸುವ ನಿರೀಕ್ಷೆಯಿದೆ.