ಚಿಕ್ಕಬಳ್ಳಾಪುರ : ನಿವೃತ್ತ ಯೋಧರನ್ನು ಲೋಕಾಯುಕ್ತಕ್ಕೆ ನೇಮಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಉಪ ಲೋಕಾಯುಕ್ತ ನ್ಯಾ. ಎನ್ ಫಣೀಂದ್ರ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಿವೃತ್ತ ಯೋಧರನ್ನು ಲೋಕಾಯುಕ್ತಕ್ಕೆ ನೇಮಿಸಿಕೊಳ್ಳಲು ಚಿಂತನೆ ನಡೆದಿದೆ ಪ್ರಾಮಾಣಿಕ ನಿವೃತ್ತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತದೆ, ಶೀಘ್ರವೇ ಸರ್ಕಾರದ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಸಂಸ್ಥೆ ಮೇಲೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಯತ್ನ ಮಾಡಲಾಗುತ್ತದೆ. ನಮ್ಮ ಸಂಸ್ಥೆಗೆ ಪ್ರಾಮಾಣಿಕತೆ ಇರುವವರು ಬೇಕು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಿವೃತ್ತ ಯೋಧರನ್ನು ಲೋಕಾಯುಕ್ತಕ್ಕೆ ನೇಮಿಸಿಕೊಳ್ಳುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ