ನವದೆಹಲಿ : ಎಲ್ ಜಿಗೆ ದೂರು ನೀಡಿದ ನಂತರ ಎಎಪಿ ನಾಯಕ ಸತ್ಯೇಂದ್ರ ಜೈನ್ ಮತ್ತು ತಿಹಾರ್ ಜೈಲಿನ ಮಾಜಿ ಡಿಜಿ (ಜೈಲುಗಳು) ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಜೈಲಿನಲ್ಲಿರುವ ಬಂಧಿತ ಸುಕೇಶ್ ಚಂದ್ರಶೇಖರ್ ಮತ್ತೊಂದು ಪತ್ರ ಬರೆದಿದ್ದಾರೆ.
BIGG NEWS : ವಿಧಾನಸಭಾ ಸದಸ್ಯರ ಸೋಗಿನಲ್ಲಿ ‘KSRTC’ ವ್ಯವಸ್ಥಾಪಕ ನಿರ್ದೇಶಕರಿಗೆ ವಂಚನೆಗೆ ಯತ್ನ : ಆರೋಪಿ ಅರೆಸ್ಟ್
ಕೆಲದಿನಗಳ ಹಿಂದೆ ಸುಕೇಶ್ ದೆಹಲಿಯ ಎಲ್ ಜಿ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು ಬಂಧಿತ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ರಕ್ಷಣಾ ಹಣ’ವಾಗಿ 10 ಕೋಟಿ ರೂ.ನೀಡಿರುವವುದಾಗಿ ಆರೋಪಿಸಿದ್ದನು.
2015 ರಿಂದ ಎಎಪಿ ನಾಯಕನ ಬಗ್ಗೆ ತಿಳಿದಿದ್ದೇನೆ. ಪಕ್ಷದ ಪ್ರಮುಖ ಸ್ಥಾನವನ್ನು ನೀಡುವುದಾಗಿ ಭರವಸೆ ನೀಡಿದ್ದರಿಂದ ಒಟ್ಟು 50 ಕೋಟಿ ರೂ.ಗಳನ್ನು ಎಎಪಿಗೆ ಪಾವತಿಸಲಾಗಿದೆ ಎಂದು ಪತ್ರದಲ್ಲಿ ಹೇಳಿದ್ದನು.
ಮಿಸ್ಟರ್ ಕೇಜ್ರಿವಾಲ್, ನಿಮ್ಮ ಪ್ರಕಾರ ನಾನು ದೇಶದ ದೊಡ್ಡ ಕೊಲೆಗಡುಕ, ಹೀಗಿರುವಾಗ ನನ್ನಿಂದ 50 ಕೋಟಿ ಪಡೆದು ರಾಜ್ಯಸಭಾ ಸ್ಥಾನ ಕೊಡಿಸಿದ್ದು ಏಕೆ? ಅದು ನಿಮ್ಮನ್ನು ನಗಿಂತ ಮಹಾ ದರೋಡೆಕೋರರನ್ನಾಗಿ ಮಾಡಿದೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಮತ್ತೊಂದು ಸ್ಫೋಟಕ ಹೇಳಿಕೆಯನ್ನು ನೀಡಿದ ಸುಕೇಶ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. ಎಎಪಿ ಮುಖ್ಯಸ್ಥರು 20-30 ಜನರನ್ನು ಕರೆತಂದು ಪಕ್ಷಕ್ಕೆ ಸೀಟು ವಿನಿಮಯಕ್ಕಾಗಿ 500 ಕೋಟಿ ರೂ.ಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾನೆ.
ಉನ್ನತ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾನೆ. ಮೊದಲು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ನಂತರ ಅವರ ಪದೇ ಪದೇ ವಿನಂತಿಸಿದ ನಂತರ ಸ್ಥಳಾಂತರಿಸಲಾಯಿತು. ತಿಹಾರ್ ಜೈಲಿನಿಂದ ತನಗೆ ಪ್ರಾಣ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದ.
2015 ರಿಂದ ಎಎಪಿಯ ಶ ಸತ್ಯೇಂದ್ರ ಜೈನ್ ಅವರಿಗೆ ತಿಳಿದಿದೆ ಮತ್ತು ದಕ್ಷಿಣ ವಲಯದಲ್ಲಿ ನನಗೆ ಪಕ್ಷದ ಪ್ರಮುಖ ಹುದ್ದೆಯನ್ನು ನೀಡುವ ಭರವಸೆಯಲ್ಲಿ ಆಪ್ಗೆ 50 ಕೋಟಿಗೂ ಹೆಚ್ಚು ಕೊಡುಗೆ ನೀಡಿದ್ದೇನೆ ಮತ್ತು
ಈ ಬಗ್ಗೆ ಪ್ರತಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸುಕೇಶ್ ಆರೋಪವನ್ನು ತಳ್ಳಿಹಾಕಿದ್ದಾರೆ,. ಇದು ಗುಜರಾತ್ನ ಮೋರ್ಬಿಯಲ್ಲಿ ಸೇತುವೆ ಕುಸಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷದ ಮೇ ತಿಂಗಳಲ್ಲಿ ಬಂಧಿಸಿತ್ತು. ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಮತ್ತೊಂದು ಕ್ರಿಮಿನಲ್ ಪ್ರಕರಣದಲ್ಲಿ ಜೈನ್ ಅವರನ್ನು ಮೇ 30 ರಂದು ಇಡಿ ಬಂಧಿಸಿತ್ತು.
ರಾಜ್ಯ ಸರ್ಕಾರದ ವಿರುದ್ಧ ‘ವಾಟ್ಸಾಪ್ ಸ್ಟೇಟಸ್’ ಹಾಕಿ ಕೆಲಸ ಕಳ್ಕೊಂಡ ‘ಪಂಚಾಯತಿ ಕ್ಲರ್ಕ್’