ತೆಲಂಗಾಣ: ಕುಡಿಯಲು ಬಾರ್ಗೆ ಹೋದ ವ್ಯಕ್ತಿಯೊಬ್ಬ ಆಮ್ಲೆಟ್ ಗಂಟಲಿನಲ್ಲಿ ಸಿಕ್ಕಿಕೊಂಡ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಜನಗಾಮ ಜಿಲ್ಲೆಯ ಬಚನ್ನಪೇಟೆಯಲ್ಲಿ ನಡೆದಿದೆ.
ಬಚ್ಚನ್ನಪೇಟೆಯ ಇದುಲಕಂತಿ ಭೂಪಾಲ್ ರೆಡ್ಡಿ (38) ಮೃತ ವ್ಯಕ್ತಿ. ಇವರು ಸ್ಥಳೀಯ ಮದ್ಯದ ಅಂಗಡಿಯೊಂದರಲ್ಲಿ ಕೊಠಡಿಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ, ತಿನ್ನುತ್ತಿದ್ದ ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.