ಶಿವಮೊಗ್ಗ : ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ಇವರ ಆದೇಶ ಮತ್ತು ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಜಿ+2 ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆನ್ಲೈನ್ ಅರ್ಜಿಗಳನ್ನು ವೆಬ್ಸೈಟ್ Shivamoggacitycorp.org ಜಾಲತಾಣದ Ashraya Yojana Application ಮೆನುವಿನಲ್ಲಿ ಸಲ್ಲಿಸಬೇಕು. ನವೆಂಬರ್ 5 ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ. 2023 ರ ಜನವರಿ 31 ಅರ್ಜಿ ಸಲ್ಲಿಸಲು ಕಡೆಯ ದಿನ ಮತ್ತು 2023 ರ ಫೆಬ್ರವರಿ 07 ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.
18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಪುರಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಆಗಿರಬೇಕು. ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಿರಬೇಕು. ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಿರಬೇಕು. ಸ್ವಂತ ನಿವೇಶನ ಹೊಂದಿರಬಾರದು. ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ತೃತೀಯ ಲಿಂಗಿಗಳೂ ಸಹ ಅರ್ಜಿಯನ್ನು ಸಲ್ಲಿಸಬಹುದು.
BIGG NEWS ; ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಮೂರು ಕಂತುಗಳಲ್ಲಿ ಬಾಕಿ ಪಾವತಿ |7th Pay Commission
ಸಾಮಾನ್ಯ ಪ್ರವರ್ಗ-1, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ರೂ.200/- ಇಎಂಡಿ ರೂ.8000/- ಒಟ್ಟು ರೂ.8200/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ರೂ.100/-, ಇಎಂಡಿ ರೂ.5000 ಒಟ್ಟು ರೂ.5100/- ಆಗಿದ್ದು ನಗರದ ಕೆನರಾ ಬ್ಯಾಂಕ್ನ ಎಲ್ಲಾ ಶಾಖೆಗಳಲ್ಲಿ/ಬ್ಯಾಂಕ್ ಆಫ್ ಬರೋಡಾದ ಎಸ್ಆರ್ ಶಾಖೆಗಳಲ್ಲಿ/ಇಂಡಿಯನ್ ಬ್ಯಾಂಕ್ನ ಮಹಾನಗರಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಟಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಅರ್ಜಿದಾರರ ಇತ್ತೀಚಿನ 01 ಪಾಸ್ಪೋರ್ಟ್ ಸೈಜಿನ ಕಲರ್ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಜಾತಿ, ಇತರೆ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್ಪುಸ್ತಕ, ವಾರ್ಷಿಕ ಆದಾಯ ಪ್ರಮಾಣ ಪತ್ರದ ಸೇರಿದಂತೆ ಎಲ್ಲ ಮೂಲ ದಾಖಲಾತಿಗಳು ಹಾಗೂ ದಾಖಲಾತಿಗಳ ಸಂಖ್ಯೆಯನ್ನು ಆನ್ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೂಲ ದಾಖಲೆಯಲ್ಲಿರುವಂತೆ ಮಾಹಿತಿಯನ್ನು ಸ್ಪಷ್ಟವಾಗಿ ಸಲ್ಲಿಸಬೇಕೆಂದು ನಗರ ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.