ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ವಿದ್ಯುತ್ ಬಿಲ್ ಪಾವತಿಯಾಗದಿದ್ದರಿಂದ ಐತಿಹಾಸಿಕ ಹಾಗೂ ಚಾಮರಾಜನಗರದ ಆರಾಧ್ಯ ದೈವ ಚಾಮರಾಜೇಶ್ವರನಿಗೆ ಗುರುವಾರ ಕತ್ತಲಲ್ಲಿ ಪೂಜೆ ಸಲ್ಲಿಸಲಾಗಿದೆ. ನಗರದ ಹೃದಯಭಾಗದಲ್ಲಿರುವ ಚಾಮರಾಜೇಶ್ವರ ದೇಗುಲದ ವಿದ್ಯುತ್ ಬಿಲ್ನ್ನು ಮುಜರಾಯಿ ಇಲಾಖೆಯು ಬಾಕಿ ಉಳಿಸಿಕೊಂಡಿರುವುದರಿಂದ ಸೆಸ್ಕ್ ಸಿಬ್ಬಂದಿ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಭಕ್ತರು ಬ್ಯಾಟರಿ ಬೆಳಕಿನಲ್ಲೇ ದೇವರ ದರ್ಶನ ಪಡೆದಿದ್ದಾರೆ.
ಕಾರ್ತಿಕ ಮಾಸವಾಗಿರುವುದರಿಂದ ಶಿವನ ಭಕ್ತರು ಅದರಲ್ಲೂ ಮಹಿಳೆಯರು ಚಾಮರಾಜೇಶ್ವರನ ದರ್ಶನ ಮಾಡಲು ದಾಂಗುಡಿ ಇಡುತ್ತಿದ್ದರು. ಆದರೆ, ವಿದ್ಯುತ್ ಇಲ್ಲದಿರುವುದರಿಂದ ಮಹಿಳೆಯರು ದೇಗುಲದ ಹೊರಗೆ ಕೈ ಮುಗಿದು ಸೆಸ್ಕ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
60-70 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ:- ಈ ಹಿಂದೆಯೂ ವಿದ್ಯುತ್ ಕಡಿತಗೊಳಿಸಲು ಮುಂದಾದ ವೇಳೆ 15 ದಿನ ಕಾಲಾವಕಾಶ ಪಡೆದು ವಿದ್ಯುತ್ ಪಾವತಿ ಮಾಡಲಾಗಿತ್ತು. ಆದರೆ, ನಿನ್ನೆ ಸಂಜೆ 5 ರ ಹೊತ್ತಿಗೆ ವಿದ್ಯುತ್ ಕಡಿತ ಮಾಡಿದ್ದು 60-70 ಸಾವಿರಕ್ಕೂ ಹೆಚ್ಚು ರೂಪಾಯಿ. ವಿದ್ಯುತ್ ಬಿಲ್ ಬಾಕಿ ಇದೆ ಎಂದು ತಿಳಿದು ಬಂದಿದೆ.
ಐತಿಹಾಸಿಕ ದೇವಾಲಯ ಹಾಗೂ ಸಹಸ್ರಾರು ಭಕ್ತರ ಶ್ರದ್ಧಾ ಭಕ್ತಿಯಿಂದ ಭೇಟಿ ಕೊಡುವ ಸ್ಥಳಕ್ಕೆ ಅಧಿಕಾರಿಗಳು ಈ ರೀತಿ ವರ್ತನೆ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 40 ವರ್ಷಗಳಿಂದ ದೇವಾಲಯದಲ್ಲಿ ಕೆಲಸ ಮಾಡಿಕೊಂಡಿದ್ದು ಇದೇ ಮೊದಲ ಬಾರಿಗೆ ಹೀಗೆ ಕತ್ತಲಲ್ಲಿ ದೇವರಿರುವುದು ಎಂದು ದೇಗುಲದ ನೌಕರರೂ ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೊಂದು ಬಿಲ್ ಬರಲು ಕಾರಣ: ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದ ಎಷ್ಟೊ ಕಾರ್ಯಕ್ರಮಗಳು ಇದೆ ದೇವಾಲಯದಿಂದ ವಿದ್ಯುತ್ ಸಂಪರ್ಕ ಪಡೆದು ಕಾರ್ಯಕ್ರಮ ನಡೆಸಲಾಗುತ್ತದೆ. ಜಿಲ್ಲಾಡಳಿತದಲ್ಲಿ ಜೆ.ಎಚ್.ಪಟೆಲ್ ಸಭಾಂಗಣ ಇದ್ದರೂ ಇಲ್ಲಿ ಮಾತ್ರ ಕಾರ್ಯಕ್ರಮ ಆಯೋಜನೆ ಮಾಡಿ ಸಾರ್ವಜನಿಕ ಸಂಚಾರಕ್ಕೂ ಕಿರಿಕಿರಿಯಾಗಿದೆ.ಇತ್ತೀಚಿಗೆ ರಾಜ್ ಕುಮಾರ್ ಕಲಾಮಂದಿರವಿದ್ದು ಇಲಾಖಾ ಸಹಯೋಗದ ಕಾರ್ಯಕ್ರಮಗಳನ್ನ ಅಲ್ಲೆ ಆಯೋಜನೆ ಮಾಡುವುದರಿಂದ ದೇವಾಲಯದ ಮುಂದಿನ ಕಾರ್ಯಕ್ರಮದಿಂದಾಗುವ ಕಿರಿಕಿರಿ ಹಾಗೂ ವಿದ್ಯುತ್ ಸಂಪರ್ಕದ ಹೆಚ್ಚುವರಿ ಬಿಲ್ ತಗ್ಗಿಸಬಹುದು ಎನ್ನುತ್ತಾರೆ ಸಾರ್ವಜನಿಕರು..
ಮಳೆಯಲ್ಲಿ ನೆನೆಯುತ್ತಿರೊ ರಥ: ಕೋಟಿಗಟ್ಟಲೆ ವ್ಯಯಿಸಿ ರಥ ನಿರ್ಮಾಣ ಮಾಡಿ ಜಾತ್ರೆ ಮಾಡಿ ಮುಗಿಸಿದ್ದಾರೆ. ದಸರಾ ವೇಳೆ ದೇವಾಲಯದ ಮುಂಬಾಗ ಕಾರ್ಯಕ್ರಮ ಮಾಡಲು ರಥವನ್ನ ಜೆಸಿಬಿ ತರಿಸಿ ಅವೈಜ್ಞಾನಿಕ ಶೆಡ್ಡಿಗೆ ತಳ್ಳಿದ್ದಾರೆ. ಆ ಶೆಡ್ ಮೇಲ್ಚಾವಣೆ ಇಲ್ಲದೆ ಇರೊದರಿಂದ ಮಳೆ ಬಿಸಿಲಿಗೆ ಮೈವೊಡ್ಡಿ ಸೊರಗಿದೆ. ಅದಿಕಾರಿಗಳು ಮಾತ್ರ ಕೆಲಸವಾದ ಮ್ಯಾಲೆ ನಮಗೂ ಇದಕ್ಕೂ ಸಂಬಂದ ಇಲ್ಲ ಎಂಬಂತೆ ಸುಮ್ಮನಿದ್ದಾರೆ.
ನೂತನವಾಗಿ ಬಂದಿರೊ ಜಿಲ್ಲಾದಿಕಾರಿ ರಮೇಶ್ ಅವರು ಚಾಮರಾಜನಗರ ಚಾಮರಾಜೇಶ್ವರ ದೇವಾಲಯದ ಮುಂದೆ ನಡೆಯೊ ಯಾವುದೆ ಕಾರ್ಯಕ್ರಮಕ್ಕೂ ಅವಕಾಶ ನೀಡದೆ ಕಲಾಮಂದಿರದಲ್ಲೆ ಕಾರ್ಯಕ್ರಮ ಮಾಡಲು ಸೂಚಿಸೊ ಜೊತೆಗೆ ನೂತನ ರಥಕ್ಕೂ ಸೂಕ್ತ ನಿಲುಗಡೆ ತಾಣ ಮಾಡಿ ರಥವನ್ನ ಸಂರಕ್ಷಣೆ ಮಾಡಲು ಕ್ರಮ ವಹಿಸಬೇಕಾಗಿದೆ.