ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಇದೀಗ ಕುಂದೂರಲ್ಲಿ ಚಂದ್ರಶೇಖರ್ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇನ್ನೂ, ಪ್ರಕರಣದ ಸುತ್ತ ಹತ್ತು ಹಲವು ಅನುಮಾನಗಳು ಎದ್ದಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖರ ನಡೆಸಲು ಸರ್ಕಾರ ಸೂಚನೆ ನೀಡಿದೆ.
ಈ ಬೆನ್ನಲ್ಲೇ ವಿಧಿ ವಿಜ್ಞಾನ ತಂಡ ಹಾಗೂ ವೈದ್ಯರ ತಂಡವು ಡಯಾಟಮ್ ಪರೀಕ್ಷೆಗೆ ಮುಂದಾಗಿದೆ. ಕಾರು ನಾಲೆಗೆ ಬೀಳುವ ಮುನ್ನ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಅಥವಾ ನಾಲೆಗೆ ಕಾರು ಬಿದ್ದ ಬಳಿಕವೇ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಡಯಾಟಮ್ ಪರೀಕ್ಷೆ ನಡೆಸಲಾಗುತ್ತದೆ.
ಫ್ಲೋರೆನ್ಸಿಕ್ ಮೆಡಿಸಿನ್ ತಂಡದಿಂದ ಡಯಾಟಮ್ ಪರೀಕ್ಷೆ ನಡೆಯಲಿದ್ದು, ಈ ಮೂಲಕ ಶ್ವಾಸಕೋಶವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಚಂದ್ರು ಕಾರಿನ ಸಮೇತ ನೀರಿಗೆ ಬಿದ್ದು ಮೃತಪಟ್ಟಿದ್ದರೆ ಅವರ ಶ್ವಾಸಕೋಶದ ಒಳಗೆ ನೀರು ತುಂಬಿಕೊಳ್ಳುತ್ತದೆ, ನೀರಿನಲ್ಲಿದ್ದ ಕಾರಣ ಶವ ಕೊಳೆತು ಶ್ವಾಸಕೋಶದಲ್ಲಿರುವ ನೀರು ಒಂದು ವೇಳೆ ಹೊರಗೆ ಹೋದರೂ ಕಲ್ಮಶವು ಅಲ್ಲಿಯೇ ಉಳಿದಿರುತ್ತದೆ, ಹೀಗಾಗಿ ಡಯಾಟಮ್ ಪರೀಕ್ಷೆಯಲ್ಲಿ ಶ್ವಾಸಕೋಶದಲ್ಲಿ ಕಲ್ಮಶ ಇರುವುದು ಪತ್ತೆಯಾದಲ್ಲಿ ಚಂದ್ರಶೇಖರ್ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ ವಿಷಯ ಸ್ಪಷ್ಟವಾಗಲಿದೆ.
ಈಗಾಗಲೇ ಹುಟ್ಟೂರು ಕುಂದೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ಎಲ್ಲ ಸಿದ್ಧತೆ ನಡೆದಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಅನೇಕರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಮೃತ ಚಂದ್ರಶೇಖರ್ ಅಂತಿಮಯಾತ್ರೆಗೆ ಸಿದ್ಧತೆ ನಡೆಸಲಾಗಿದೆ.
ದಾವಣಗೆರೆ ಎಸ್ ಪಿ ಸಿ.ಬಿ ರಿಷ್ಯಂತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ. ಚಂದ್ರಶೇಖರ್ ಸಾವಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತೇವೆ. ಎಫ್ ಎಸ್ ಎಲ್ ತಜ್ಞರ ಜೊತೆ ಚರ್ಚಿಸಿದ್ದೇವೆ. ಎಫ್ ಎಸ್ ಎಲ್ ವರದಿ ನೋಡಿ ಏನಾಗಿದೆ ಎಂದು ತಿಳಿಸುತ್ತೇವೆ ಎಂದರು. ಅ. 31 ರಂದು ಚಂದ್ರಶೇಖರ್ ಕಾಣೆಯಾದ ಬಗ್ಗೆ ದೂರ ನೀಡಿದ್ದಾರೆ ಎಂದು ಹೊನ್ನಾಳಿ ಕಡದಕಟ್ಟೆ ಗ್ರಾಮದಲ್ಲಿ ಅಲೋಕ್ ಕುಮಾರ್ ಹೇಳಿದ್ದಾರೆ.
2023ರಲ್ಲಿ ‘ಭಾರತ’ ಎಲ್ಲಾ ಕ್ಷೇತ್ರಗಳಲ್ಲಿಯೂ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತೆ ; ‘ಬಾಬಾ ವಂಗಾ’ ಭವಿಷ್ಯ
BREAKING NEWS: ಸಿಲಿಕಾನ್ಸಿಟಿಯಲ್ಲಿ ಮತ್ತೆ ವರುಣನ ಆರ್ಭಟ: ಜನರು ಹೈರಾಣು