ಕೆಎನ್ಎನ್ಡಿಜಿಟಲ್ ಡೆಸ್ಕ್ : ಟ್ವಿಟರ್ನಲ್ಲಿ ವಾರ್ ಶುರುವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದು, ನಟ ವಿಶಾಲ್, ಪ್ರಧಾನಿ ಮೋದಿ ಅವ್ರನ್ನ ಹೊಳಗಿ ಮಾಡಿರುವ ಟ್ವೀಟ್ಗೆ ಪ್ರಕಾಶ ರಾಜ್ ಶಾಟ್ ಓಕೆ ಎನ್ನುವ ಮೂಲಕ ಕೌಂಟರ್ ಕೊಟ್ಟಿದ್ದಾರೆ.
ಇಷ್ಟಕ್ಕೂ ಏನಿದು ವಾರ್.?
ಕೆಲ ದಿನಗಳ ಹಿಂದೆ ನಟ ವಿಶಾಲ್ ವಾರಣಾಸಿಗೆ ತೆರಳಿದ್ದು, ಅಲ್ಲಿನ ಅನುಭವಗಳನ್ನ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ. ವಿಶಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿ ಟ್ಯಾಗ್ ಮಾಡಿದ್ದು ಮಾತ್ರವಲ್ಲದೇ ಟ್ವೀಟ್’ನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಪಿನ್ ಮಾಡಿ ಮೇಲೆ ಕಾಣಿಸುವಂತೆ ಮಾಡಿದ್ದಾರೆ. ಇನ್ನು ವಿಶಾಲ್ ಟ್ವೀಟ್ ಮಾಡಿದ ಮೂರು ದಿನಗಳ ನಂತರ ಇಂದು ನಟ ಮತ್ತು ನಿರ್ದೇಶಕ ಪ್ರಕಾಶ್ ರಾಜ್ ರಂಗ ಪ್ರವೇಶಿಸಿದ್ದು, ‘ಶಾಟ್ ಓಕೆ..ಮುಂದೆ…???’ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ನಟನ ಟ್ವೀಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ನಟ ವಿಶಾಲ್ ಟ್ವೀಟ್ನಲ್ಲಿ ಏನಿದೆ.?
“ನಾನು ಮೋದಿಜಿ ಕಾಶಿಗೆ ಹೋಗಿದ್ದೆ. ದರ್ಶನ, ಪೂಜೆ ಎಲ್ಲವೂ ಅದ್ಬುತವಾಗಿತ್ತು. ಪವಿತ್ರ ಗಂಗಾಜಲವನ್ನ ಮುಟ್ಟಿದೆ. ಈ ನಗರವನ್ನ ಮತ್ತು ಈ ದೇವಾಲಯವನ್ನ ಎಲ್ಲರೂ ಭೇಟಿ ನೀಡುವಂತೆ ಸುಂದರವಾಗಿರುವಂತೆ ಮಾಡಿದ್ದಕ್ಕಾಗಿ ನಾನು ನಿಮ್ಮನ್ನ ಪ್ರಶಂಸಿಸದೆ ಇರಲಾರೆ. ಹ್ಯಾಟ್ಸ್ ಆಫ್ ನಿಮಗೆ” ಎಂದು ಬರೆದಿದ್ದಾರೆ.
ಅಂದ್ಹಾಗೆ, ನಟ ವಿಶಾಲ್ ತಮ್ಮ ನಿಜವಾದ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಆದ್ರೆ, ಪ್ರಕಾಶ್ ರಾಜ್ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಟ್ವೀಟ್ ಹಿಂದೆ ವಿಶಾಲ್ ಅವರ ಉದ್ದೇಶ ಬೇರೆಯೇ ಇದೆ ಎಂಬ ಅನುಮಾನವನ್ನ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಶಾಲ್ ಆಕ್ರಮಣಶೀಲತೆಯೇ ಕಾರಣ.
ಹೌದು, ವಿಶಾಲ್ ಹಲವಾರು ವರ್ಷಗಳಿಂದ ಸಾಮಾಜಿಕ ಸಮಸ್ಯೆಗಳನ್ನ ವಿಷಯವಾಗಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ವಿಶಾಲ್ ಅಭಿನಯದ ಅಭಿಮನ್ಯುಡು, ಟೆಂಪರ್ ರಿಮೇಕ್ ಅಯೋಗ್ಯ ಮತ್ತು ಚಕ್ರ ಸಿನಿಮಾಗಳು ಸಾಮಾಜಿಕ ಅಂಶಗಳನ್ನ ಪ್ರಶ್ನಿಸಿದ್ದವು. ಡಿಜಿಟಲ್ ಇಂಡಿಯಾ, ಆಧಾರ್ ಕಾರ್ಡ್, ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪುಹಣ ವಾಪಸ್ ತರುವುದು, ನೋಟು ಅಮಾನ್ಯೀಕರಣ ಹೀಗೆ ಹಲವು ವಿಷಯಗಳ ಬಗ್ಗೆ ನಿರ್ಭೀತಿಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶಾಲ್ ಅವರು ಸಿನಿಮಾದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನ ಗುರಿಯಾಗಿಸಿಕೊಂಡು ಆರೋಪ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಅದೇ ಸಮಯದಲ್ಲಿ, ಚಲನಚಿತ್ರಗಳಲ್ಲಿನ ಸಂಭಾಷಣೆಗಳನ್ನ ಮ್ಯೂಟ್ ಮಾಡುವ ಮೂಲಕ ಸೆನ್ಸಾರ್ ಮಂಡಳಿಯು ತೆಗೆದುಕೊಂಡ ನಿರ್ಧಾರಗಳು, ಆದಾಯ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ನಡೆದ ಐಟಿ ದಾಳಿಯಿಂದ ವಿಶಾಲ್ ಹಲವು ಸಮಸ್ಯೆಗಳನ್ನ ಎದುರಿಸಿದ್ದರು. ಆ ಕಷ್ಟದ ಸಮಯದಲ್ಲಿ ವಿಶಾಲ್ ಅವರ ಅಭಿಮಾನಿಗಳು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದರಿಂದ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದರು. ಆಡಿಯೋ ರಿಲೀಸ್ ಮತ್ತು ರಿಲೀಸ್ ಪೂರ್ವ ಸಮಾರಂಭಗಳಲ್ಲಿ ವಿಶಾಲ್ ತಮ್ಮ ಮೇಲಿನ ಆರೋಪಗಳು ಮತ್ತು ಬಿಜೆಪಿ ವಿರೋಧಿ ಇಮೇಜ್ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ.
ಈಗ ಈ ಬದಲಾವಣೆ..?
ಅದೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯ ಕಾರ್ಯವೈಖರಿಯಿಂದ ಅವರು ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿರುವಾಗ್ಲೇ, ಪ್ರಧಾನಿ ಮೋದಿಯವರ ಸುಧಾರಣಾ ಕ್ರಮಗಳನ್ನ ಶ್ಲಾಘಿಸಿ ವಿಶಾಲ್ ಮಾಡಿರುವ ಟ್ವೀಟ್ ಹಲವರನ್ನ ಅಚ್ಚರಿಗೊಳಿಸಿದೆ. ಅದೇ ಸಮಯದಲ್ಲಿ ಪ್ರಕಾಶ್ ರಾಜ್ ಅವರ ಪ್ರವೇಶವು ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ. ಕಾರಣ ಪ್ರಕಾಶ್ ರಾಜ್ ಬಿಜೆಪಿ ಪಕ್ಷ ಮತ್ತು ಪ್ರಧಾನಿ ಮೋದಿಯ ಟೀಕಾಕಾರ ಮತ್ತು ವಿರೋಧಿ. ಬಿಜೆಪಿಯನ್ನ ಸೋಲಿಸಲೇಬೇಕು ಎಂಬ ಸಂಕಲ್ಪದಿಂದ ಕಳೆದ ಚುನಾವಣೆಯಲ್ಲಿ ಬೆಂಗಳೂರಿನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇನ್ನು ಅನೇಕ ಸಂದರ್ಭಗಳಲ್ಲಿ #JustAsking ಹೇಳುವ ಮೂಲಕ ಬಿಜೆಪಿಯ ನಿರ್ಧಾರಗಳನ್ನ ಮತ್ತು ಮೋದಿಯವರ ಹೇಳಿಕೆಗಳನ್ನ ವಿರೋಧಿಸುತ್ತಿದ್ದಾರೆ. ಇದೀಗ ವಿಶಾಲ್ ಟ್ವೀಟ್’ಗೆ ಪ್ರಕಾಶ್ ರೀಟ್ವೀಟ್ ಮಾಡಿ ಶಾಟ್ ಓಕೆ ಎಂದಿದ್ದಾರೆ.
ವಿದ್ಯಾರ್ಥಿಗಳು ಅತಿರೇಕದ ಹೆಜ್ಜೆಯಿಟ್ರೆ ‘ಶಿಕ್ಷಕ’ರನ್ನ ದೂಷಿಸುವಂತಿಲ್ಲ ; ಹೈಕೋರ್ಟ್
BIGG NEWS: ನವೆಂಬರ್ .07 ರಂದು ಮಾಸ್ಕೋಗೆ ಭೇಟಿ ನೀಡಲಿರುವ EAM ಜೈಶಂಕರ್ | Jaishankar to visit Moscow