ಬ್ಯಾಂಕಾಕ್ : ವಿಮಾನದಲ್ಲಿ ಬ್ಯಾಂಕಾಕ್ಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ವಿಮಾನದ ಶೌಚಾಲಯದ ಒಳಗೆ ಹೋಗಿ ಸಿಗರೇಟ್ ಸೇದಲು ಹೋಗಿ ಶೌಚಾಲಯ ಬೆಂಕಿಯಿಂದ ಧಗಧಗಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಟೆಲ್ ಅವೀವ್ನಿಂದ ಬ್ಯಾಂಕಾಕ್ಗೆ ಎಲ್ ಅಲ್ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟ್ ಸೇದಿ ಅದರ ತುಂಡನ್ನು ಕಸದ ತೊಟ್ಟಿಗೆ ಬಿಸಾಡಿದ್ದಾನೆ. ಅದರ ಕಿಡಿಯಿಂದ ಕಸದ ತೊಟ್ಟಿಯಲ್ಲಿದ್ದ ಪೇಪರ್ ಹೊತ್ತಿ ಉರಿಯಲು ಆರಂಭಿಸಿದೆ. ಈ ವೇಳೆ ಶೌಚಾಲಯದಲ್ಲಿದ್ದ ಟಾಯ್ಲೆಟ್ ಪೇಪರ್ ಮತ್ತು ಟಿಶ್ಯೂಗಳನ್ನು ಸುಟ್ಟು ಬೆಂಕಿಗಾಹುತಿಯಾಗಿದ್ದು, ಶೌಚಾಲಯ ಪೂರ್ಣ ಸುಟ್ಟುಹೋಗಿದೆ.
ಇದ್ರಿಂದ ಎಚ್ಚೆತ್ತುಕೊಂಡ ಅಲ್ಲಿನ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಮಾನವು ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
BIG BREAKING NEWS:ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ & ನಟ ಶಶಿಕುಮಾರ್ ಬಿಜೆಪಿ ಸೇರ್ಪಡೆ
BIG BREAKING NEWS:ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ & ನಟ ಶಶಿಕುಮಾರ್ ಬಿಜೆಪಿ ಸೇರ್ಪಡೆ