ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಪ್ರಿಯಾ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್ ಎನ್ ಗ್ರಾಮ ನಿವಾಸಿಯಾದ ಸುಪ್ರಿಯಾ ಬ್ಲೂಟೂತ್ ಬಳಸಿ ಅಕ್ರಮವಾಗಿ ಪಿಎಸ್ ಐ ಪರೀಕ್ಷೆ ಬರೆದಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸುಪ್ರಿಯಾ ಹೆಸರಿತ್ತು, ಈ ಹಿನ್ನೆಲೆ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ್ಗೊಳಪಡಿಸಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಿಐಡಿ ಪೊಲೀಸರು ಹಲವರನ್ನು ಇದುವರೆಗೆ ಬಂಧಿಸಿ ಜೈಲಿಗಟ್ಟಿದ್ದಾರೆ, ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಒಬ್ಬೊಬ್ಬರನ್ನಾಗಿ ಬಲೆಗೆ ಬೀಳಿಸುತ್ತಿದ್ದಾರೆ.
ಒಂದಲ್ಲಾ, ಎರಡಲ್ಲ ವಾಟ್ಸಾಪ್’ನಲ್ಲಿ ಬರ್ತಿವೆ 5 ಅದ್ಭುತ ವೈಶಿಷ್ಟ್ಯ, ಹೇಗೆ ಕಾರ್ಯ ನಿರ್ವಹಿಸುತ್ವೆ ಗೊತ್ತಾ?
‘ಬಿಗ್ ಬಾಸ್ ‘-9 ವಿನ್ನರ್ ಗುಟ್ಟು ಬಿಚ್ಚಿಟ್ಟ ನಟಿ ‘ಮಯೂರಿ’ | BIGG BOSS-9