ಬೆಂಗಳೂರು : ರಾಜ್ಯದಲ್ಲಿ 11 ಕೈಗಾರಿಕಾ ಕ್ಲಸ್ಟರ್ ಗಳನ್ನು ಗುರುತಿಸಲಾಗಿದ್ದು, ಇವುಗಳಿಂದ ಮುಂದಿನ ಒಂಬತ್ತು ವರ್ಷಗಳಲ್ಲಿ 9 ಲಕ್ಷ ಉದ್ಯೋಗಗಳು ( Jobs ) ಸೃಷ್ಟಿಯಾಗಲಿವೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಹೇಳಿದ್ದಾರೆ.
ರೈಲ್ವೆ ಪ್ರಯಾಣಿಕರೇ ಗಮನಿಸಿ: ಪ್ರಯಾಣದ ವೇಳೇ ಈ ರೀತಿ ಮಾಡಿದ್ರೆ ದಂಡ ವಿಧಿಸಲಾಗುತ್ತದೆ
ಬೆಂಗಳೂರಿನಲ್ಲಿ ಬುಧವಾರ ಆರಂಭವಾದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅವರು ‘ಜಾಗತೀಕರಣ ಮತ್ತು ಭಾರತಕ್ಕೆ ಇರುವ ಅವಕಾಶಗಳು’ ಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ಅವರ ಬಂಡವಾಳದ ಶೇ. 25ರಿಂದ 30ರಷ್ಟನ್ನು ಸಬ್ಸಿಡಿಯಾಗಿ ಕೊಡಲಾಗುತ್ತಿದೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ ಎಂದು ಅವರು ವಿವರಿಸಿದರು.
ರಾಮನಗರದಲ್ಲಿ ವಿದ್ಯುತ್ ಚಾಲಿತ ವಾಹನ, ಧಾರವಾಡದಲ್ಲಿ ಇಎಸ್ಜಿಎಂ, ಕೊಪ್ಪಳದಲ್ಲಿ ಆಟಿಕೆ, ಯಾದಗಿರಿಯಲ್ಲಿ ಔಷಧ ವಲಯದ ಕ್ಲಸ್ಟರುಗಳು ಅಸ್ತಿತ್ವಕ್ಕೆ ಬರಲಿವೆ. ಇವು ಕರ್ನಾಟಕದ ಸಮತೋಲಿತ ಬೆಳವಣಿಗೆಗೆ ದಾರಿ ಮಾಡಿಕೊಡಲಿವೆ ಎಂದು ಅವರು ಹೇಳಿದರು.
ರಾಜ್ಯದ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ಮಹತ್ವದ ಮಾಹಿತಿ: ‘ಸಹ-ಪಠ್ಯಚಟುವಟಿಕೆ ಸ್ಪರ್ಧೆ’ಗೆ ವೇಳಾಪಟ್ಟಿ ಪ್ರಕಟ
ದೇಶದಲ್ಲಿ ತಯಾರಾಗುತ್ತಿರುವ ಮೊಬೈಲುಗಳಲ್ಲಿ ಶೇ.97ರಷ್ಟು ಇಲ್ಲೇ ತಯಾರಾಗುತ್ತಿದೆ. ರಾಜ್ಯವು ಎಲ್ಲ ಆಧುನಿಕ ಉದ್ಯಮಗಳಿಗೆ ಸಂಬಂಧಿಸಿದಂತೆಯೂ ಸಮರ್ಥ ನೀತಿಗಳನ್ನು ರೂಪಿಸಿದೆ ಎಂದು ಅವರು ಪ್ರತಿಪಾದಿಸಿದರು.
ಈ ‘ಗೂಗಲ್ ಸೇವೆ’ ಶಾಶ್ವತವಾಗಿ ಬಂದ್ ; ನಿಮ್ಮ ಅಮೂಲ್ಯ ‘ಡೇಟಾ’ ತಕ್ಷಣವೇ ಡೌನ್ಲೋಡ್ ಮಾಡ್ಕೊಳ್ಳಿ
ಗೋಷ್ಠಿಯಲ್ಲಿ ಗ್ಲೋಬಲ್ ಗವರ್ನೆನ್ಸ್ ಫೋರಂನ ಕಾರ್ಯ ನಿರ್ವಾಹಕ ನಿರ್ದೇಶಕ ಆಗಸ್ಟೋ ಲೋಪೆಜ್ ಕ್ಲಾರೋಸ್ ಮತ್ತು ಅಮೆರಿಕದ ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯ ಡಾ.ಅಮಿತ್ ಕಪೂರ್ ಇದ್ದರು.