ಬೆಂಗಳೂರು: ಮೊದಲು ಬೋರ್ಡ್, ನಂತರ ಪ್ರಮಾಣ! ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ ಇಲ್ಲದ ಸಿಎಂ ಪ್ರಮಾಣ ಮಾಡಿದರೆ ಫಲ ಉಂಟೇ? ಪ್ರಮಾಣದಲ್ಲಿ ಪ್ರಾಮಾಣಿಕತೆ ಇದ್ದರೆ 40% ಕಮಿಷನ್ ಹಗರಣವನ್ನ, ಸಂತೋಷ್ ಪಾಟೀಲ್ ಪ್ರಕರಣವನ್ನ, PSI ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನ ( PSI Recruitment Scam ) ನ್ಯಾಯಾಂಗ ತನಿಖೆಗೆ ನೀಡಲಿ. ಇಲ್ಲವಾದಲ್ಲಿ ಇಂತಹ ಬೂಟಾಟಿಕೆಯ ನಾಟಕಗಳನ್ನು ಬಿಡಲಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
ಮೊದಲು ಬೋರ್ಡ್, ನಂತರ ಪ್ರಮಾಣ!
ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ ಇಲ್ಲದ ಸಿಎಂ ಪ್ರಮಾಣ ಮಾಡಿದರೆ ಫಲ ಉಂಟೇ?ಪ್ರಮಾಣದಲ್ಲಿ ಪ್ರಾಮಾಣಿಕತೆ ಇದ್ದರೆ
40% ಕಮಿಷನ್ ಹಗರಣವನ್ನ, ಸಂತೋಷ್ ಪಾಟೀಲ್ ಪ್ರಕರಣವನ್ನ, PSI ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನ ನ್ಯಾಯಾಂಗ ತನಿಖೆಗೆ ನೀಡಲಿ.ಇಲ್ಲವಾದಲ್ಲಿ ಇಂತಹ ಬೂಟಾಟಿಕೆಯ ನಾಟಕಗಳನ್ನು ಬಿಡಲಿ. pic.twitter.com/M9hNADEPe6
— Karnataka Congress (@INCKarnataka) November 2, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ! ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿದೆಯೇ? PSI ಅಕ್ರಮದ ಬಸವರಾಜ್ ದಡೇಸಾಗುರರನ್ನು ತನಿಖೆ ಮಾಡದೆ, 40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸದೆ ಭ್ರಷ್ಟಾಚಾರ ಬೆಂಬಲಿಸುವುದಿಲ್ಲ ಎಂಬ ನಿಮ್ಮ ಪ್ರಮಾಣಕ್ಕೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ!@BSBommai ಅವರೇ, ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿದೆಯೇ?
PSI ಅಕ್ರಮದ ಬಸವರಾಜ್ ದಡೇಸಾಗುರರನ್ನು ತನಿಖೆ ಮಾಡದೆ, 40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸದೆ ಭ್ರಷ್ಟಾಚಾರ ಬೆಂಬಲಿಸುವುದಿಲ್ಲ ಎಂಬ ನಿಮ್ಮ ಪ್ರಮಾಣಕ್ಕೆ ಯಾವ ನೈತಿಕತೆ ಇದೆ?#SayCM pic.twitter.com/9dSnO9RUQy
— Karnataka Congress (@INCKarnataka) November 2, 2022
ಕುಸಿದ ಕಾನೂನು ಸುವ್ಯವಸ್ಥೆ. ರಸ್ತೆ ಗುಂಡಿಗಳು. ಮಳೆ ಅವಾಂತರಕ್ಕೆ ಪರಿಹಾರವಿಲ್ಲ. ಕಸ ವಿಲೇವಾರಿ ಸಮಸ್ಯೆ. ವೃದ್ಧಿಸದ ಮೂಲ ಸೌಕರ್ಯ ವ್ಯವಸ್ಥೆ. ಕಳೆಗುಂದಿದ ಬ್ರಾಂಡ್ ಬೆಂಗಳೂರು. ಹಲವು ಉದ್ಯಮಗಳ ನಿರ್ಗಮನ #40percentsarkara ದಲ್ಲಿ ಇಷ್ಟೆಲ್ಲಾ ಆಗಿರುವಾಗ ಹೂಡಿಕೆದಾರರಿಗೆ ಯಾವ ಭರವಸೆ ಮೂಡಲು ಸಾಧ್ಯ? ಎಂದು ಕೇಳಿದೆ.
◆ಕುಸಿದ ಕಾನೂನು ಸುವ್ಯವಸ್ಥೆ
◆ರಸ್ತೆ ಗುಂಡಿಗಳು
◆ಮಳೆ ಅವಾಂತರಕ್ಕೆ ಪರಿಹಾರವಿಲ್ಲ
◆ಕಸ ವಿಲೇವಾರಿ ಸಮಸ್ಯೆ
◆ವೃದ್ಧಿಸದ ಮೂಲ ಸೌಕರ್ಯ ವ್ಯವಸ್ಥೆ
◆ಕಳೆಗುಂದಿದ ಬ್ರಾಂಡ್ ಬೆಂಗಳೂರು
◆ಹಲವು ಉದ್ಯಮಗಳ ನಿರ್ಗಮನ#40percentsarkara ದಲ್ಲಿ ಇಷ್ಟೆಲ್ಲಾ ಆಗಿರುವಾಗ ಹೂಡಿಕೆದಾರರಿಗೆ ಯಾವ ಭರವಸೆ ಮೂಡಲು ಸಾಧ್ಯ?#InvestKarnataka2022— Karnataka Congress (@INCKarnataka) November 2, 2022