ಬಳ್ಳಾರಿ : ಕಾಲುವೆಗೆ ನೀರು ಹರಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಸಚಿವ ಶ್ರೀರಾಮುಲು ಕಾಮಗಾರಿ ಸ್ಥಳದಲ್ಲಿ ಮಲಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಸಚಿವ ಶ್ರೀರಾಮುಲು ನದಿ ತೀರದಲ್ಲಿ ಮಲಗಿದ್ದಾರೆ ಎಂದರೆ ರಾಮ ರಾಜ್ಯದ ಪರಿಸ್ಥಿತಿ ಏನೆಂದು ಅರ್ಥೈಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀರಾಮುಲುಗೆ ಧನ್ಯವಾದ. ಅವರು ಹೀಗೆ ಮಲಗಿಯೇ ಇರಲಿ ಎಂದರು.
ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಬಳಿ ವೇದಾವತಿಗೆ ಹಾಕಿದ ಮೇಲ್ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಹದಿನೈದು ಹಿನ್ನೆಲೆಯಲ್ಲಿ ನೀರು ಬಿಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಎಕರೆ ಬೆಳೆ ಹಾನಿ ಉಂಟಾಗಿತ್ತು. ಇದರಿಂದಾಗಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಬೇಗ ಮುಗಿಸಿಲು ಸಚಿವ ಶ್ರೀರಾಮುಲು ಮುಂದಾಗಿದ್ದರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಶ್ರೀರಾಮುಲು ಅವರು, ಕಾಮಗಾರಿ ಪೂರ್ಣ ಮುಗಿಯೋವರೆಗೂ ಅಲ್ಲೇ ವಾಸ್ತವ್ಯಕ್ಕೆ ನಿರ್ಧರಿಸಿ ಅಲ್ಲಿಯೇ ರಾತ್ರಿ ಕಳೆದಿದ್ದಾರೆ. ಈ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಸಚಿವ ಶ್ರೀರಾಮುಲು ನದಿ ತೀರದಲ್ಲಿ ಮಲಗಿದ್ದಾರೆ ಎಂದರೆ ರಾಮ ರಾಜ್ಯದ ಪರಿಸ್ಥಿತಿ ಏನೆಂದು ಅರ್ಥೈಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಅವರು ಹೀಗೆ ಮಲಗಿಯೇ ಇರಲಿ ಎಂದರು.
ಶಿವಮೊಗ್ಗ: ನ.6ರಂದು TET ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ
‘ಅಯ್ಯೋ…ನನ್ ಹೆಂಡ್ತಿ ಹೊಡೀತಾಳೆ’ : ಪ್ರಧಾನಿ ಮೋದಿಗೆ ಮೊರೆಯಿಟ್ಟ ‘ಪತಿರಾಯನ ಪೋಸ್ಟ್’ ವೈರಲ್