ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಾರಿವಾಳಗಳು ಹೊಸ ವೈರಸ್ ಸೋಂಕಿಗೆ ಒಳಗಾಗಿವೆ. ಈ ವೈರಸ್ ಸೋಂಕಿಗೆ ಒಳಗಾದ ನಂತ್ರ ಪಾರಿವಾಳಗಳು ಜೋಂಬಿಗಳಾಗುತ್ವೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪಾರಿವಾಳಗಳಲ್ಲಿ ಕಾಣಿಸಿಕೊಳ್ಳುವ ರೋಗಕ್ಕೆ ಪಾರಿವಾಳ ಪ್ಯಾರಾಮಿಕ್ಸೊವೈರಸ್ (PPMV)ಎಂದು ಕರೆಯಲಾಗ್ತಿದೆ. ಈ ಕಾಯಿಲೆಗೆ ತುತ್ತಾದ ನಂತ್ರ ಪಾರಿವಾಳಗಳು ಜೋಂಬಿಳಂತೆ ವರ್ತಿಸಲು ಪ್ರಾರಂಭಿಸುತ್ತವೆ, ಆದ್ದರಿಂದ ಕೆಲವು ನೆಟ್ಟಿಗರು ಈ ಪಾರಿವಾಳಗಳನ್ನ ‘ಜೋಂಬಿ ಪಾರಿವಾಳಗಳು’ ಎಂದು ಕರೆಯುತ್ತಿದ್ದಾರೆ. ಪಾರಿವಾಳಗಳಲ್ಲಿ ಈ ಹೊಸ ರೋಗವು ಬ್ರಿಟನ್ನಲ್ಲಿ ಹರಡಿದೆ ಎಂದು ಅನೇಕ ಮಾಧ್ಯಮ ವರದಿಗಳು ಹೇಳುತ್ತವೆ. ಈ ವೈರಸ್ ಸೋಂಕಿಗೆ ಒಳಗಾದಾಗ, ಪಾರಿವಾಳದ ಮೆದುಳು ತನ್ನ ಸಮತೋಲನವನ್ನ ಕಳೆದುಕೊಳ್ಳುತ್ತದೆ. ಸಮತೋಲನವನ್ನ ಕಾಪಾಡಿಕೊಳ್ಳಲು ಕುತ್ತಿಗೆಗೆ ಕಷ್ಟವಾಗುತ್ತದೆ. ಮೇಲಾಗಿ, ಪಾರಿವಾಳವೂ ಹಾರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ಪಾರಿವಾಳ ಪ್ಯಾರಾಮಿಕ್ಸೊವೈರಸ್, ಇದನ್ನ PPMV ಅಥವಾ ನ್ಯುಕೆಸಲ್ ಕಾಯಿಲೆ ಎಂದೂ ಕರೆಯುತ್ತಾರೆ. ಇದು ಪಕ್ಷಿಗಳ ನಡುವೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗದ ಲಕ್ಷಣಗಳೆಂದರೆ ಕತ್ತಿನ ನಿಯಂತ್ರಣ ಕಳೆದುಕೊಳ್ಳುವುದು, ಹಾರಲು ಅಸಮರ್ಥತೆ, ರೆಕ್ಕೆಗಳು ಮತ್ತು ಕಾಲುಗಳು ನಡುಗುವುದು. ಬ್ರಿಟನ್ನಲ್ಲಿರುವ ಪಾರಿವಾಳಗಳು ಈಗ ವೈರಸ್ ಸೋಂಕಿಗೆ ಒಳಗಾಗಿವೆ. ನ್ಯೂಜೆರ್ಸಿಯಲ್ಲಿ ಕೆಲವು ಪಾರಿವಾಳಗಳು ವೈರಸ್ನಿಂದ ಸಾವನ್ನಪ್ಪಿವೆ. ಈ ವೈರಸ್ ವಿರುದ್ಧ ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ.
ಬ್ರಿಟನ್ನಲ್ಲಿರುವ ಪಾರಿವಾಳಗಳು ಪ್ಯಾರಾಮಿಕ್ಸೊವೈರಸ್ (PPMV) ಸೋಂಕಿಗೆ ಒಳಗಾಗಿವೆ. ಇದು ಬ್ರಿಟನ್ನಲ್ಲಿರುವ ಪಾರಿವಾಳಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಸೋಂಕಿತ ಪಾರಿವಾಳಗಳಲ್ಲಿ ಕುತ್ತಿಗೆಯ ಚಲನೆ ಮತ್ತು ರೆಕ್ಕೆ ನಡುಗುವಿಕೆಯಂತಹ ಲಕ್ಷಣಗಳು ಕಂಡುಬರುತ್ತವೆ. ಸೋಂಕಿತ ಪಾರಿವಾಳವು ಚಲಿಸಲು ಅಥವಾ ಹಾರಲು ಸಾಧ್ಯವಿಲ್ಲ. ಈ ರೋಗದಿಂದ ಸೋಂಕಿತ ಪಾರಿವಾಳಗಳು ಹಸಿರು ಹಿಕ್ಕೆಗಳನ್ನ ಹೊಂದಿರುತ್ತವೆ. ಈ ರೋಗವು ಪಾರಿವಾಳಗಳಲ್ಲಿ ಬಹಳ ಮಾರಣಾಂತಿಕ ಕಾಯಿಲೆಯಾಗಿದೆ.
ಈ ರೋಗವು ಪಾರಿವಾಳಗಳ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪಾರಿವಾಳವು ಚಲಿಸುವುದಿಲ್ಲ ಅಥವಾ ಹಾರುವುದಿಲ್ಲ. ಇದರಿಂದಾಗಿ ಪಾರಿವಾಳದ ಕುತ್ತಿಗೆ ತಿರುಗುತ್ತದೆ. ಗಾಳಿಯಲ್ಲಿ ಹಾರುವಾಗ ಅದು ನೆಲಕ್ಕೆ ಬೀಳುತ್ತದೆ. ಪಾರಿವಾಳಗಳಲ್ಲಿ ಈ ರೋಗವು ತುಂಬಾ ಮಾರಕವಾಗಿದೆ. ಆದಾಗ್ಯೂ, ಮಾನವರು ಈ ಕಾಯಿಲೆಯಿಂದ ಸೋಂಕಿಗೆ ಒಳಗಾಗುವುದಿಲ್ಲ. ಇದು ಪಕ್ಷಿಗಳ ರೋಗ ಎಂದು ತಜ್ಞರು ಹೇಳುತ್ತಾರೆ.
‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್