ಹುಬ್ಬಳ್ಳಿ : ಕರ್ತವ್ಯ ನಿರತ ಕಂಡಕ್ಟರ್ ರೊಬ್ಬರು ಬಸ್ ನಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮಹೇಶ್ವರ್ ಹೂಗಾರ್ ಎಂಬ ಕಂಡಕ್ಟರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ಸಿಗೆ ಚೆಕ್ಕಿಂಗ್ ಇನ್ಸ್ಪೆಕ್ಟರ್ ಹತ್ತಿದ್ದಾರೆ, ಚೆಕ್ಕಿಂಗ್ ಇನ್ಸ್ಪೆಕ್ಟರ್ ಕಂಡು ಗಾಬರಿಯಾದ ಮಹೇಶ್ವರ್ ಹೂಗಾರ್ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಕೂಡಲೇ ಬಸ್ ನಲ್ಲೇ ಕಂಡಕ್ಟರ್ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಚೆಕ್ಕಿಂಗ್ ಇನ್ಸ್ಪೆಕ್ಟರ್ ಕಂಡು ಗಾಬರಿಯಾದ ಮಹೇಶ್ವರ್ ಹೂಗಾರ್ ಅವರಿಗೆ ಹೃದಯಾಘಾತವಾಗಿದ ಎನ್ನಲಾಗಿದೆ. ಇನ್ನೂ. . ಕಂಡಕ್ಟರ್ಗೆ ಹಾರ್ಟ್ ಅಟ್ಯಾಕ್ ಆಗುತ್ತಿದ್ದಂತೆ ಚೆಕ್ಕಿಂಗ್ ಇನ್ಸ್ಪೆಕ್ಟರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಂದೇ ಕುಟುಂಬದ ನಾಲ್ವರು ಸಾವು
ವಿಜಯನಗರ: ಜಿಲ್ಲೆಯ ಚನ್ನಹಳ್ಳಿ ತಾಂಡಾದಲ್ಲಿ ಘೋರ ದುರಂತ ನಡೆದಿದೆ. ತಾಂಡಾದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.
ವಿಜಯನಗರದ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿ ಘಟನೆ ನಡೆದಿದೆ. ಮುಳುಗುತ್ತಿದ್ದ ತಮ್ಮನ ರಕ್ಷಣೆಗೆ ತೆರಳಿದ್ದ ಮೂವರು ಅಕ್ಕಂದಿರ ಸಾವನ್ನಪ್ಪಿದ್ದಾರೆ. ಹೊಂಡದಲ್ಲಿ ಮುಳುಗುತ್ತಿದ್ದ ಅಭಿ ಎಂಬಾತನ ರಕ್ಷಣೆಗೆ ಸಹೋದರಿಯರು ತೆರಳಿದ್ದರು. 13 ವರ್ಷದ ಅಭಿ, 14 ವರ್ಷದ ಅಶ್ವಿನಿ ಹಾಗೂ 18 ವರ್ಷದ ಕಾವೇರಿ ಮತ್ತು 18 ವರ್ಷದ ಅಪೂರ್ವ ಮೃತ ದುರ್ದೈವಿಗಳು. ಈ ಘಟನೆ ಸಂಬಂಧ ಹರಪ್ಪನಹಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ICC Rankings ; ‘ವಿಶ್ವದ ನಂ.1 ಟಿ20 ಬ್ಯಾಟ್ಸ್ ಮ್ಯಾನ್’ ಆಗಿ ಹೊರಹೊಮ್ಮಿದ ‘ಸೂರ್ಯಕುಮಾರ್ ಯಾದವ್’
BIGG NEWS: ಶಾಸಕ ಸುರೇಶ್ ಕುಮಾರ್ ಫೇಸ್ ಬುಕ್ ಅಕೌಂಟ್ ಹ್ಯಾಕ್; ಹಣ ಕೇಳಿದ ಕಿಡಿಗೇಡಿಗಳು
‘ಬಿಜೆಪಿ ಭಸ್ಮಾಸುರನಿದ್ದಂತೆ, ಯಾರ ತಲೆ ಮೇಲೆ ಕೈ ಇಟ್ಟರೂ ಅವರು ಭಸ್ಮ ಆಗುತ್ತಾರೆ’ : ಕಾಂಗ್ರೆಸ್ ವಾಗ್ಧಾಳಿ
ಸಾಂದರ್ಭಿಕ ಚಿತ್ರ