ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ( MLA MP Renukacharya ) ಅವರ ಸಹೋದರನ ಪುತ್ರ ಚಂದ್ರಶೇಖರ್ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವಂತ ಅವರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಇಂದು ತಮ್ಮ ಸಹೋದರನ ಪುತ್ರನನ್ನು ನೆನೆದಂತ ಶಾಸಕ ಎಂ.ಪಿ ರೇಣುಕಾಚಾರ್ಯ ಚಂದ್ರು ಎಲ್ಲಿದ್ದೀಯಾ ಬಾರೋ ಎಂಬುದಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.
ಈ ಬಗ್ಗೆ ಇಂದು ಸುದ್ದಿ ಕಳೆದ ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಯಲ್ಲಿ ವಿನಯ್ ಗುರೂಜಿಯವರನ್ನು ಹಾಗೂ ಸ್ನೇಹಿತ ಕಿರಣ್ ಅವರನ್ನುಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಭೇಟಿಯಾಗಿದ್ದಾರೆ.
BIGG NEWS: ಎಎಪಿ ಸಚಿವ ಸತ್ಯೇಂದ್ರ ಜೈನ್ ಗೆ ಲಂಚ ನೀಡಿದ್ದೇನೆ : ಸುಕೇಶ್ ಚಂದ್ರಶೇಖರ್ ಆರೋಪ
ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಒಳವು ಹೊಂದಿದ್ದಂತ ಚಂದ್ರಶೇಖರ್ ಅಲ್ಲಿಂದ ರಾತ್ರಿ 11.56ಕ್ಕೆ ವಾಪಾಸ್ ಆಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಸೋಮವಾರ ಬೆಳಿಗ್ಗೆ 6.48ಕ್ಕೆ ಅವರ ಮೊಬೈಲ್ ಲಾಸ್ಟ್ ಲೊಕೇಶನ್ ತೋರಿಸುತ್ತಿದೆ.
ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಹುಡುಕಾಡುತ್ತಿದ್ದಾರೆ.
‘ಅಪ್ಪು’ ಅಭಿಮಾನಿಗಳಿಗಾಗಿ ಮತ್ತೆ ಹುಟ್ಟಿ ಬನ್ನಿ – ಸಿಎಂ ಬಸವರಾಜ ಬೊಮ್ಮಾಯಿ | Karnataka Ratna Award
ಇನ್ನೂ ಶಾಸಕರ ಸಹೋದರ ರಮೇಶ್, ತಮ್ಮ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿರೋದನ್ನು ಯೋಚಿಸುತ್ತಾ ತಲೆಯ ಮೇಲೆ ಕೈಹೊತ್ತು ಅಳುತ್ತಿರೋದನ್ನು ಗಮನಿಸಿದಂತ ಶಾಸಕ ಎಂ.ಪಿ ರೇಣುಕಾಚಾರ್ಯ ಚಂದ್ರು ಎಲ್ಲಿದ್ದೀಯ ಬಾರೋ ಎಂಬುದಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.